ಲೋಕಾಯುಕ್ತ ಶಿವರಾಜ್ ಪಾಟೀಲರ ಆಸ್ತಿ 3.7 ಕೋಟಿ ರು

Lokayukta Shivaraj Patil
ಬೆಂಗಳೂರು ಆ.26: ಕರ್ನಾಟಕ ಲೋಕಾಯುಕ್ತ ಶಿವರಾಜ್ ವಿ ಪಾಟೀಲ್ ಅವರು ತಮ್ಮ ಹಾಗೂ ತಮ್ಮ ಪತ್ನಿಯ ಆಸ್ತಿ ವಿವರಗಳನ್ನು ಲೋಕಾಯುಕ್ತ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದಾರೆ.

ಶಿವರಾಜ್ ಪಾಟೀಲ್ ದಂಪತಿ ಆಸ್ತಿ ಒಟ್ಟು 3.7 ಕೋಟಿ ರು ಎಂದು ಘೋಷಿಸಲಾಗಿದೆ. ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶ ಪಾಟೀಲರ ಸ್ಥಿರ ಆಸ್ತಿ ಮೊತ್ತ 62,47,556 ರು ಹಾಗೂ ಅವರ ಪತ್ನಿ 66,34,880 ರು ಹೊಂದಿದ್ದಾರೆ.

ಶಿವರಾಜ್ ಪಾಟೀಲ್ ಅವರು ಬ್ಯಾಂಕ್ ನಲ್ಲಿ ಶಾಶ್ವತ ಠೇವಣಿ(fixed deposit)ಯಾಗಿ 63.33 ಲಕ್ಷ ರು ಇಟ್ಟಿದ್ದಾರೆ. ಅವರ ಪತ್ನಿ 10 ಲಕ್ಷ ಠೇವಣಿ ಇಟ್ಟಿದ್ದಾರೆ.

ಒಟ್ಟಾರೆ 3.72 ಕೋಟಿ ರು ಮೊತ್ತದ ಆಸ್ತಿ ಹೊಂದಿದ್ದಾರೆ. ವಿಶೇಷವೆಂದರೆ 78.72 ಲಕ್ಷ ರು ಸಾಲವನ್ನು ಪಾಟೀಲರು ಇನ್ನು ಬಾಕಿ ಉಳಿಸಿಕೊಂಡಿದ್ದಾರೆ.

ಸಂತೋಷ್ ಹೆಗ್ಡೆ ಅವರಿಂದ ತೆರವಾಗಿದ್ದ ಲೋಕಾಯುಕ್ತ ಸ್ಥಾನವನ್ನು ಶಿವರಾಜ್ ಪಾಟೀಲ್ ಅವರು ಆ.4ರಂದು ಅಲಂಕರಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+