ಗಂಭೀರ್ ಗೆ ಕಣ್ಣು ಮಂದ, ಏಕದಿನ ಪಂದ್ಯಕ್ಕೆ ಡೌಟ್?

ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ವೇಳೆ ತಲೆ ಹಾಗೂ ಕಣ್ಣಿಗೆ ಗಾಯ ಮಾಡಿಕೊಂಡ ಗೌತಮ್ ಅವರು ಕೆಂಟ್ ನಲ್ಲಿ ನಡೆಯಲಿರುವ ಹಗಲು ರಾತ್ರಿ ಪಂದ್ಯದಲ್ಲಿ ಆಡುವುದು ಅನುಮಾನ ಏನಿಸಿದೆ.
ಸಸ್ಸೆಕ್ ಪರ ನಡೆದ ಅಭ್ಯಾಸ ಪಂದ್ಯದಿಂದ ಹೊರಗುಳಿದ ಗಂಭೀರ್, ಲಿಸ್ಟೇಷೈರ್ ವಿರುದ್ಧ ಆ.29ರಂದು ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಆ ಪಂದ್ಯದಲ್ಲಿ ಯಾವುದೇ ತೊಂದರೆ ಕಂಡು ಬರದಿದ್ದಲ್ಲಿ ಆ.31 ರಂದು ಇಂಗ್ಲೆಂಡ್ ವಿರುದ್ಧ ಟ್ವೆಂಟಿ 20 ಪಂದ್ಯ ಹಾಗೂ ಮುಂದೆ ಐದು ಏಕದಿನ ಪಂದ್ಯಗಳಲ್ಲಿ ಗಂಭೀರ್ ಆಡಲಿದ್ದಾರೆ.
ಗಂಭೀರವಾದ ಸಮಸ್ಯೆ?: ಕಣ್ಣಿಗೆ ಪೆಟ್ಟು ಬಿದ್ದ ನಂತರ ಅಭ್ಯಾಸ ಮಾಡುವುದಿರಲಿ ಟಿವಿ ನೋಡುವುದು, ಮೊಬೈಲ್ ನೋಡುವುದಕ್ಕೂ ಗಂಭೀರ್ ಗೆ ಸಾಧ್ಯವಾಗಿಲ್ಲ. ಒಳಾಂಗಣ ಕ್ರೀಡಾಂಗಣದಲ್ಲಿ 45 ನಿಮಿಷಗಳ ಅಭ್ಯಾಸ ನಿರತರಾಗಿದ್ದ ಗೌತಮ್ ಫಿಟ್ ನೆಸ್ ಮೇಲೆ ಬೌಲಿಂಗ್ ಕೋಚ್ ಜೊತೆ ಎರಿಕ್ ಒಂದು ಕಣ್ಣಿಟ್ಟಿದ್ದರು.
ಸಸ್ಸೆಕ್ ಪಂದ್ಯದ ಡ್ರಿಂಕ್ಸ್ ಬ್ರೇಕ್ ನಲ್ಲಿ ಮೈದಾನದಲ್ಲಿ ಓಡುತ್ತಾ ದೈಹಿಕ ಸಾಮರ್ಥ್ಯ ಪಡೆಯಲು ಯತ್ನಿಸಿದರು. ಆದರೆ, ಇಂಗ್ಲೆಂಡ್ ವೇಗಿಗಳ ಬೆಂಕಿಯುಂಡೆಯಂಥ ಎಸೆತಗಳನ್ನು ಎದುರಿಸಲು ಗೌತಮ್ ಕಣ್ಣು ಇನ್ನೂ ಸಿದ್ಧವಾಗಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ ಆದರೆ, ಒಪ್ಪಿಕೊಳ್ಳುವುದು ಕಷ್ಟವಾಗಿದೆ.












Click it and Unblock the Notifications