ಆಪಲ್ ತೋಟದ ಮಾಲಿ ಸ್ಟೀವ್ ಜಾಬ್ಸ್ ರಿಟೈರ್ಸ್

ಪಿತ್ತಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ಸ್ಟೀವ್, ಕಳೆದ ಜನವರಿಯಲ್ಲೇ ದೀರ್ಘ ಕಾಲದ ರಜೆ ತೆಗೆದುಕೊಂಡಿದ್ದರು. ಸ್ಟೀವ್ ಅವರ ಹುದ್ದೆಗೆ ಕಂಪನಿ ಸಿಒಒ ಟಿಮ್ ಕುಕ್ ಹೆಸರನ್ನು ಸೂಚಿಸಲಾಗಿದೆ. ಆಪಲ್ ಕಂಪನಿ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದರೂ , ಸ್ಟೀವ್ ಅವರನ್ನು ಕಂಪನಿ ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಸುಮಾರು 35 ವರ್ಷಗಳ ಹಿಂದೆ ಮನೆ ಗ್ಯಾರೇಜಿನಲ್ಲಿ ಸಣ್ಣ ಪ್ರಮಾಣದಲ್ಲಿ ಸಂಸ್ಥೆ ಆರಂಭಿಸಿದ ಸ್ಟೀವ್ ಗೆ ಟಿಮ್ ಕುಕ್ ಮೊದಲಿನಿಂದಲೂ ಸಾಥ್ ನೀಡಿದ್ದರು. ಇಂದು ಜಗತ್ತಿನಲ್ಲಿ ಮನೆ ಮಾತಾಗಿರುವ ಐ ಫೋನ್, ಐ ಪ್ಯಾಡ್, ಪಾಡ್, ಟಚ್ ಸೇರಿದಂತೆ ಉನ್ನತ ತಂತ್ರಜ್ಞಾನ ಬಳಸಿ ತಯಾರಿಸಿದ ಸಾಧಕಗಳನ್ನು ತುಂಬು ಪ್ರೀತಿಯಿಂದ ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ಟೀವ್ ಜಾಬ್ಸ್ ಗೆ ಸಲ್ಲುತ್ತದೆ.
ಐಟಿ ಜಗತ್ತಿನ ದಂತಕಥೆ ಸ್ಟೀವ್ ಬಾಲ್ಯದಲ್ಲಿ ಅನುಭವಿಸಿದ ನೋವು, ಕಾಲೇಜು ದಿನಗಳಲ್ಲಿ ಹೊಟ್ಟೆಗೆ ಹಿಟ್ಟಿಲ್ಲದೆ ಕೃಷ್ಣ ಮಂದಿರದ ಪ್ರಸಾದಕ್ಕಾಗಿ ಹಾತೋರೆದಿದ್ದು, ಆಪಲ್ ಕಂಪನಿ ಕಟ್ಟಿದ ಕಥೆ, ಮೈಕ್ರೋಸಾಫ್ಟ್ ತಂತ್ರಗಾರಿಕೆ, ಹೊಸ ಆವಿಷ್ಕಾರ, ದೈಹಿಕ ನೋವು ನುಂಗಿಕೊಂಡು ಯಶಸ್ವಿ ಉದ್ಯಮಿಯಾಗಿದ್ದು ರೋಚಕ ಕಥೆ.[ತಪ್ಪದೇ ಓದಿ : ಸ್ಟೀವ್ ಜಾಬ್ಸ್ ಮಾದರಿ ಬದುಕು]












Click it and Unblock the Notifications