ನನ್ನ ಮೇಲೆ ಅನುಮಾನ ಪಟ್ಟಿರಾ? ಶೋಭಾ ವ್ಯಥೆ

Minister Shobha Karandlaje
ಸಾರ್ವಜನಿಕರಿಗೆ ಮತ್ತು ಮಾಧ್ಯಮ ಮಿತ್ರರ ಸಮಕ್ಷಮಕ್ಕೆ,

ದಿನಾಂಕ 24/08/2011 ರಂದು ರಾಜ್ಯದ ಪ್ರಮುಖ ಸುದ್ದಿ ವಾಹಿನಿಯೊಂದು ನನ್ನ ಬಗ್ಗೆ ಸುಳ್ಳು ಸುದ್ದಿಯೊಂದನ್ನು ಪ್ರಸಾರ ಮಾಡಿತೆಂದು ಕೇಳಿ ತಿಳಿದುಕೊಂಡೆ. ಈ ಸುದ್ದಿಯ ಬಗೆಗಿನ ಸತ್ಯಾಸತ್ಯತೆಯನ್ನು ರಾಜ್ಯದ ಇತರ ಮಾಧ್ಯಮಗಳು ತಿಳಿದುಕೊಳ್ಳಬೇಕೆಂಬ ವಿನಂತಿಯನ್ನು ಎಲ್ಲಾ ಮಾಧ್ಯಮ ಮಿತ್ರರಲ್ಲಿ ಮಾಡುತ್ತಿದ್ದೇನೆ.

ಇಂತಹ ಪ್ರಕರಣಗಳು ಸಾರ್ವಜನಿಕ ಬದುಕಿನಲ್ಲಿರುವವರ ನನ್ನಂತಹವರ ಮೇಲೆ ಸಂಶಯವನ್ನು ಮೂಡಿಸುತ್ತದೆ. ಈ ಸುದ್ದಿ ಸತ್ಯವೇ ? ಅಥವಾ ಇದರ ಹಿಂದಿರುವ ಉದ್ದೇಶವೇನು ? ಎಂದು ತಿಳಿದುಕೊಳ್ಳುವ ಹಕ್ಕು ಎಲ್ಲರಿಗೂ ಇದೆ.

ಏಕೆಂದರೆ ನಾನು ಜನತೆಗೆ ಉತ್ತರದಾಯಿ. ನನ್ನನ್ನು ಶಾಸಕಿಯಾಗಿ ಆಯ್ಕೆ ಮಾಡಿ, ಕ್ಯಾಬಿನೆಟ್ ದರ್ಜೆ ಮಂತ್ರಿಯನ್ನಾಗಿ ಮಾಡಿದ ನನ್ನ ಕ್ಷೇತ್ರದ ಜನರೂ ಸೇರಿದಂತೆ ರಾಜ್ಯದ 6 ಕೋಟಿ ಜನರಿಗೆ ಉತ್ತರ ಕೊಡುವ ಅಗತ್ಯವಿದೆ. ಅದು ನನ್ನ ಕರ್ತವ್ಯ ಕೂಡ.

ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದಕ್ಕಾಗಿಯೇ ಇಂತಹ ಸುದ್ದಿಯೊಂದು ಪ್ರಸಾರವಾಗಿದೆಯೆಂದು ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಲ್ಲರು. ಜನ ಪ್ರತಿನಿಧಿಗಳ ಬಗ್ಗೆ ಮಾದ್ಯಮದಲ್ಲಿ ಸುದ್ದಿ ಬರುವಾಗ ಆ ಮಾಧ್ಯಮಕ್ಕೂ ಜವಾಬ್ದಾರಿ ಇರುತ್ತದೆಯೆಂದು ಜನರ ಹಾಗೂ ನನ್ನ ಭಾವನೆ. ಆದರೆ ಅಂತಹ ಭಾವನೆಗಳು ನಿಮ್ಮಂತಹ ಕೆಲವು ಟಿ.ವಿ. ಮಾಧ್ಯಮಗಳು ಬಿತ್ತರಿಸುತ್ತಿರುವ ಸುದ್ದಿಯಿಂದಾಗಿ ಸುಳ್ಳಾಗುತ್ತಿವೆ.

ಮುಂದುವರಿದಿದೆ...
-ಶೋಭಾ ಕರಂದ್ಲಾಜೆ, ಬೆಂಗಳೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+