ಕೆಲವರ ವಿಕೃತ ಸಂತೋಷಕ್ಕೆ ನಾನು ಬಲಿ-ಶೋಭಾ

ಅಂತಹ ಶಕ್ತಿ ಮಾಧ್ಯಮಕ್ಕಿದೆ. ಆದರೆ ಕಳೆದುಹೋದ ವ್ಯಕ್ತಿತ್ವನ್ನು ಪುನರ್ ನಿರ್ಮಾಣ ಮಾಡಲು ಈ ಸಮಾಜ ದಶಕಗಳನ್ನೇ ತೆಗೆದುಕೊಳ್ಳುತ್ತದೆ. ಈ ನಷ್ಟ ಭರಿಸುವವರು ಯಾರು ?
ಜನಮುಖಿ ಮಾಧ್ಯಮಗಳು, ನನ್ನಂತೆಯೇ ಗ್ರಾಮೀಣ ಪ್ರದೇಶದಿಂದ ಬಂದು ಜನಸೇವೆ ಮಾಡುತ್ತಿರುವ ಹಲವಾರು ಜನರನ್ನು ಗುರುತಿಸಿ ಪ್ರೋತ್ಸಾಹಿಸಿವೆ. ಅಂತೆಯೇ ನನ್ನ ಅನೇಕ ಸಾಮಾಜಿಕ ಚಟುವಟಿಕೆಗಳನ್ನೂ ಸಹ ಗುರುತಿಸಿವೆ.
ಪರಿಸರ ಸ್ನೇಹಿ ಹೋರಾಟಗಳು, ಸುನಾಮಿ ಬಂದಾಗ ನಾಗಪಟ್ಟಣಂನಲ್ಲಿ ನಾನು ಮಾಡಿದ ಕಾರ್ಯ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಬದಲಾವಣೆ ತರಲು ಮಾಡಿದ ಅವಿರತ ಪ್ರಯತ್ನ ನಂತರ ಅಧಿಕಾರದಿಂದ ವಂಚಿತಳಾದರೂ ನಾನು ಮಾಡಿದ ನಕ್ಸಲಿಸಂ ಬಗೆಗಿನ ಹೋರಾಟ ಮತ್ತು ಆ ಪ್ರದೇಶಗಳ ಭೇಟಿ, ನೆರೆ ಹಾವಳಿ ಪ್ರದೇಶಗಳಲ್ಲಿ ನನ್ನ ಕಾರ್ಯ, ಎಂಡೋಸಲ್ಫಾನ್ ಪೀಡಿತರಿಗಾಗಿ ಮಾಡಿದ ಹೋರಾಟ, ಮಂಗಳಮುಖಿಯರ (ತೃತೀಯ ಲಿಂಗಿಗಳು) ಬಗ್ಗೆ ಸರ್ಕಾರದ ಗಮನ ಸೆಳೆದಿದ್ದು ಇತ್ಯಾದಿ ಸಮಾಜಮುಖಿ ಕೆಲಸಗಳನ್ನು ಈ ರಾಜ್ಯದ ಜನ ಮತ್ತು ಮಾಧ್ಯಮಗಳು ಪ್ರೋತ್ಸಾಹಿಸಿವೆ.
ಈ ಪ್ರೋತ್ಸಾಹವೇ ನನಗೆ ಹೆಚ್ಚು ಕೆಲಸ ಮಾಡಲು ಶಕ್ತಿ ಹಾಗೂ ಪ್ರೇರಣೆಯನ್ನು ಕೊಟ್ಟಿದೆ. ಈಗಲೂ ಅತ್ಯಂತ ಕಠಿಣ ಸಮಸ್ಯೆಗಳಿರುವ ಎರಡು ಇಲಾಖೆಗಳಲ್ಲಿ ನನ್ನ ಶಕ್ತಿ ಮೀರಿ ಸುಧಾರಣೆಗೆ ಒತ್ತು ನೀಡುತ್ತಿದ್ದೇನೆ.
ಮುಂದುವರೆದಿದೆ...
-ಶೋಭಾ ಕರಂದ್ಲಾಜೆ, ಬೆಂಗಳೂರು












Click it and Unblock the Notifications