ನನ್ನ ಕೈ ಕೊಳಕೆಂದು ಸಾಬೀತಾದರೆ, ಗುಡ್ ಬೈ

Minister Shobha Karandlaje
ಇಂತಹ ಸಂದರ್ಭದಲ್ಲಿ ಕಳೆದ ವಾರದಲ್ಲಿ ಒಂದು ದಿನ ಪತ್ರಿಕೆ ಮತ್ತು ನಿನ್ನೆ ಸುದ್ದಿ ವಾಹಿನಿಯೊಂದರಲ್ಲಿ ಬಂದ ಸುದ್ದಿಯಿಂದ ಮನಸ್ಸಿಗೆ ತುಂಬಾ ನೋವಾಗಿದೆ. ರಾಜಕಾರಣಿಗಳೆಂದರೆ ಅಸಹ್ಯ ಪಡುವ ಈ ಕಾಲಘಟ್ಟದಲ್ಲಿ ಪ್ರಾಮಾಣಿಕವಾಗಿ ಶ್ರದ್ದೆಯಿಂದ ಕೆಲಸ ಮಾಡುವ ನನ್ನ ಬಗ್ಗೆ ಹಗುರವಾಗಿ, ಅವಹೇಳನಕಾರಿಯಾಗಿ ಸಂಶಯ ಮೂಡುವ ರೀತಿಯಲ್ಲಿ ಬಿಂಬಿಸುವುದು ಎಷ್ಟು ಸರಿ ಎಂಬುದು ನನ್ನ ಪ್ರಶ್ನೆ.

ಇದನ್ನು ಮಾಧ್ಯಮಗಳ ಹಿರಿಯರಾದ ನೀವು ಒಪ್ಪಿಕೊಳ್ಳುತ್ತೀರಾ? ಹಲವು ವರ್ಷಗಳಿಂದ ಚುನಾಯಿತ ಪ್ರತಿನಿಧಿಯಾದ ನಾನು ರಾಜ್ಯ ಯಾವುದೇ ಜನರಿಂದ, ಅಧಿಕಾರಿಗಳಿಂದ, ಉದ್ಯಮಿಗಳಿಂದ ಲಂಚ ಪಡೆದಿದ್ದೇನೆಂದು ಯಾರಾದರೂ ಸಾಬೀತು ಮಾಡಿದರೆ ನಾನು ಸಾರ್ವಜನಿಕ ಬದುಕಿನಿಂದ ದೂರವಾಗಲು ತಯಾರಿದ್ದೇನೆ.

ನಾನು ವಿದೇಶದಲ್ಲಿ ಹಣ ತೊಡಗಿಸಿದ್ದೇನೆಂಬ ಎಂತಹ ಅಪ್ಪಟ ಸುಳ್ಳನ್ನು ಬಿತ್ತರಿಸಿದ್ದೀರಿ. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಜನರ ಮನಸ್ಸಿನಲ್ಲಿ ಸತ್ಯ ಮಾಡಬಹುದೆಂಬುದು ನಿಮ್ಮ ಹುನ್ನಾರವಿರಬಹುದು. ಅತ್ಯಂತ ಪಾರದರ್ಶಕವಾಗಿ ನನ್ನ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ.

ಗ್ರಾಮೀಣಾಭಿವೃದ್ಧಿ ಇಲಾಖೆ, ಈಗಿರುವ ಇಂಧನ ಮತ್ತು ಆಹಾರ ಇಲಾಖೆಯ ಅಧಿಕಾರಿಗಳನ್ನು ಯಾರಾದರೂ ವಿಚಾರಿಸಲಿ. ನಾನು ಎಂದಾದರೂ ಎಂಜಲು ಕಾಸಿಗೆ ಕೈಯೊಡ್ಡಿದ್ದೇನೆಯೇ ಕೇಳಿ ನೋಡಿ. ಹೀಗಿರುವಾಗ ನಾನು ವಿದೇಶದಲ್ಲಿ ಹಣ ಇಟ್ಟಿದ್ದೇನೆಂದು ಹೇಗೆ ಹೇಳಿದ್ದೀರಿ ?

ನಿಮಗೆ ನನ್ನ ಸವಾಲಿದೆ. ನಾನು ವಿದೇಶದಲ್ಲಿ ಹಣ ಇಟ್ಟಿದ್ದನ್ನು ನೀವು ಸಾಬೀತು ಮಾಡಬೇಕು. ಕೇಂದ್ರ ಸರ್ಕಾರದಿಂದ ಈ ಮಾಹಿತಿ ತರಿಸಿಕೊಳ್ಳಬೇಕು. ಈ ಆರೋಪ ಸಾಬೀತಾದರೆ ಯಾವ ಶಿಕ್ಷೆಗೂ ನಾನು ಸಿದ್ದಳಿದ್ದೇನೆ. ಇದು ನನ್ನನ್ನು ಆರಿಸಿರುವ ಜನತೆಯಲ್ಲಿ ಮಾಡುವ ಕಳಕಳಿಯ ಮನವಿ.

-ಶೋಭಾ ಕರಂದ್ಲಾಜೆ, ಬೆಂಗಳೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+