ಚೀನಾ: ನಾಯಿಗೆ ಹೆದರಿ ಸಾವಿರ ಮೊಲಗಳ ದಾರುಣ ಸಾವು
ಬೀಜಿಂಗ್,
ಆಗಸ್ಟ್ 24: ಪೂರ್ವ ಚೀನಾದ ಹ್ಯಾಕ್ಸಿನ್ ಗ್ರಾಮದ ತೋಟವೊಂದದಲ್ಲಿ ಮೂರು ನಾಯಿಗಳು ನುಗ್ಗಿದ್ದರಿಂದ ಭಯಬಿದ್ದ 1000 ಮೊಲಗಳು ಸಾವನ್ನಪ್ಪಿದ ದಾರುಣ ಘಟನೆ ಕಳೆದ ವಾರ ವರದಿಯಾಗಿದೆ. id="toptextpromo">ಹೆಕ್ಸಿನ್
ಎಂಬ ಗ್ರಾಮದಲ್ಲಿ ನಾಯಿಗಳು ಮೊಲಗಳ ಸಾಕಾಣಿಕೆ ಕೇಂದ್ರಕ್ಕೆ ನುಗ್ಗಿದಾಗ 1000 ಮೊಲಗಳು ಸತ್ತಿವೆ. ಅವುಗಳಲ್ಲಿ 600 ಮೊಲಗಳಿಗೆ ಯಾವುದೇ ಗಾಯಗಳಾಗಿರಲಿಲ್ಲ. ಕೇವಲ ಭಯಬಿದ್ದು, ಒತ್ತಡದಿಂದಾಗಿ ಮೃತಪಟ್ಟಿವೆ ಎಂದು ಪಶುವೈದ್ಯರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ಪ್ರಾಣಿಗಳಲ್ಲಿನ
ಒತ್ತಡ'ದಿಂದ ಇವು ಮೃತಪಟ್ಟಿವೆ. ಮೊಲಗಳು ಭಯಬಿದ್ದಾಗ, ಆಂಡ್ರಿಲೈನ್ ಗ್ರಂಥಿ ಸಾಕಷ್ಟು ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಇದು ಮೊಲಗಳ ನರವ್ಯೂಹ ವ್ಯವಸ್ಥೆಯನ್ನು ಉದ್ರೇಕಿಸುತ್ತದೆ. ಹಾಗಾಗಿ ಹೃದಯ ಬಡಿತ ಹೆಚ್ಚಾಗುತ್ತದೆ. ದೇಹದ ಅವಯವಗಳು ಕಾರ್ಯ ನಿರ್ವಹಿಸುವಲ್ಲಿ ತಪ್ಪುತ್ತವೆ. ಮೊಲಗಳು ಈ ಭಯದಿಂದಾಗಿಯೇ ಸಾವನ್ನಪ್ಪಿವೆ ಎಂದು ಪಶುಪಾಲನಾ ತಜ್ಞ ಚೆನ್ ಡಾಕ್ಸಿಯಾಂಗ್ ಹೇಳಿದ್ದಾರೆ.











Click it and Unblock the Notifications