ಕಸ್ಟಡಿಯಲ್ಲಿದ್ದ ಯುವತಿ ಮೇಲೆ ಪೊಲೀಸರ ಆತ್ಯಾಚಾರ

ಸರನ್ ಜಿಲ್ಲೆಯಲ್ಲಿರುವ ಮಜ್ ಹಿ ಪೊಲೀಸ್ ಠಾಣೆಯಲ್ಲಿ 18 ವರ್ಷದ ಯುವತಿ ಮೇಲೆ ಠಾಣಾಧಿಕಾರಿ ಅತ್ಯಾಚಾರ ನಡೆಸಿರುವುದನ್ನು ಹಿರಿಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಯುವತಿಯನ್ನು ಪರೀಕ್ಷಿಸಿರುವ ವೈದ್ಯಾಧಿಕಾರಿಗಳು ಕೂಡಾ ಅದೇ ರೀತಿ ಪ್ರಮಾಣ ಪತ್ರ ನೀಡಿದ್ದಾರೆ.
ಪೊಲೀಸ್ ಠಾಣಾಧಿಕಾರಿ ಕಪೂರ್ ನಾಥ್ ಶರ್ಮ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಯುವತಿಯನ್ನು ಜೈಲಿನಲ್ಲಿರಿಸಿದರೆ ಮಹಿಳಾ ಪೇದೆಗಳನ್ನು ನೋಡಿಕೊಳ್ಳಲು ಬಿಡಬೇಕು.
ಆದರೆ, ಈ ಠಾಣೆಯಲ್ಲಿ ಅಂದು ಯಾವುದೇ ಮಹಿಳಾ ಪೇದೆ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಈ ಸಮಯ ನೋಡಿಕೊಂಡು ವಿಚಾರಣಾಧೀನ ಖೈದಿ ಮೇಲೆ ಠಾಣಾಧಿಕಾರಿ ಬಲಾತ್ಕಾರ ಮಾಡಿದ್ದಾನೆ ಎಂದು ಸರನ್ ಡಿಐಜಿ ಸುನಿಲ್ ಕುಮಾರ್ ಹೇಳಿದ್ದಾರೆ.
15 ವರ್ಷದ ತನ್ನ ಪ್ರಿಯಕರನನ್ನು ಕೊಂದ ಆರೋಪದ ಮೇಲೆ 18 ವರ್ಷದ ಯುವತಿಯನ್ನು ಬಂಧಿಸಿ, ಜೈಲಿಗೆ ಹಾಕಲಾಗಿತ್ತು.












Click it and Unblock the Notifications