ದುಬೈ ಮನೆಯೊಡತಿ-ಮಗಳ ರೇಪ್ ಹತ್ಯೆ- ಪಾತಕಿಗೆ ಗಲ್ಲು

ದುಬೈನಲ್ಲಿ ಭಾರತೀಯ ಮೂಲದ ಕುಟುಂಬವೊಂದರ ಮನೆಯಲ್ಲಿ ನೌಕರನಾಗಿದ್ದುಕೊಂಡು ಅವರ ಮನೆಯ ಹದಿಹರೆಯದ ಬಾಲಕಿ ಮತ್ತು ಆಕೆಯ ತಾಯಿಯ ಮೇಲೆ ಅತ್ಯಾಚಾರ ನಡೆಸಿ ಆ ಕುಟುಂಬದ ಐವರನ್ನು ಕೊಂದು ಭಾರತಕ್ಕೆ ಪರಾರಿಯಾಗಿದ್ದ ವ್ಯಕ್ತಿಗೆ ಸಿಬಿಐ ವಿಶೇಷ ನ್ಯಾಯಾಲಯ ಆಗಸ್ಟ್ 15ರಂದು ಮರಣ ದಂಡನೆ ಶಿಕ್ಷೆ ವಿಧಿಸಿದೆ.
ತನ್ನ ಪಾತಕಗಳು ಎಲ್ಲಿ ಬಯಲಾಗುತ್ತವೋ ಎಂದು ಒಂದರ ಮೇಲೊಂದರಂತೆ ಹತ್ಯೆಗಳನ್ನು ಮಾಡಿ, ಮಧ್ಯೆ ಅತ್ಯಾಚಾರದಂತಹ ಹೀನ ಕೃತ್ಯವೆಸಗುವ ವ್ಯವಧಾನವನ್ನೂ ಹೊಂದಿದ್ದ ಪಾತಕಿ ರವಿಜಿ ಕುಕೃತ್ಯಗಳು ಅಕ್ಷಮ್ಯ ಎಂದಿದಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಆರ್ ಎಂ ಪರಮಾರ್ ಅಪರಾಧಿಗೆ ಮರಣ ದಂಡನೆಗಿಂತಲೂ ಹೆಚ್ಚಿನ ಶಿಕ್ಷೆ ಯಾವುದಾದರೂ ಇದ್ದರೆ ಅದನ್ನೂ ವಿಧಿಸಬಹುದಾಗಿದೆ ಎಂದಿದ್ದಾರೆ.
ರವಿಜಿ ಮನು ಪವಾರ್ ಎಂಬ ಈ ಪಾತಕಿ ದುಬೈನ ಬ್ಯಾಂಕ್ ಉದ್ಯೋಗಿಯಾಗಿದ್ದ ರಮೇಶ್ ಸಾಗರ್ ಎಂಬುವವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. 1992 ಜನವರಿ 4ರಂದು ತನ್ನ ಶಾಲೆ ಮುಗಿಸಿ ದುಬೈನ ಕರಾಮದಲ್ಲಿರುವ ತಮ್ಮ ಮನೆಗೆ ಬಂದ ರಮೇಶ್ ಸಾಗರ್ ಅವರ ಮಗಳು 13 ವರ್ಷದ ಜ್ಯೋತಿ ತನ್ನ ಕೋಣೆಯಲ್ಲಿ ಸಮವಸ್ತ್ರ ಬದಲಾಯಿಸುವಾಗ ಪಾತಕಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ.
ಆಗ ಆಕೆ ಕೂಗಿ ಕೊಂಡಾಗ ಅಲ್ಲಿಗೆ ಬಂದ ಆಕೆಯ ಅಜ್ಜಿ ಮೂಲಿಬಾಯಿ ಕಿಶನ್ ಭಾಯಿ ಎಂಬಾಕೆಯ ಕುತ್ತಿಗೆಗೆ ಇರಿದು ಕೊಲೆ ಮಾಡಿ ಆನಂತರ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನೂ ಕೊಲೆ ಮಾಡಿದ್ದ.
ಆನಂತರ ಮನೆಗೆ ಬಂದ ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ರಮೇಶ್ ಸಾಗರ್ ಅವರ ಪತ್ನಿ ರಾಜೌರಿ ಅವರ ಮೇಲೆ ಸಹ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ. ಹೀಗೆ ಪಾತಕ ಕೃತ್ಯ ನಡೆಸಿದ ದುಷ್ಕರ್ಮಿ ಆನಂತರ ಮನೆಗೆ ಬಂದ ರಮೇಶ್ ಸಾಗರ್ ಹಾಗೂ ಇವರ ಮಗ ಜಯೇಶ್ ಅವರ ತಲೆಗೆ ಬ್ಯಾಟಿನಿಂದ ಹೊಡೆದು ಕೊಲೆ ಮಾಡಿ ಭಾರತಕ್ಕೆ ಪರಾರಿಯಾಗಿದ್ದ. ಇಡೀ ಕುಟುಂಬದ ಹತ್ಯಾಕಾಂಡ ಬೆಳಕಿಗೆ ಬಂದಿದ್ದು ಹೇಗೆ? ಮುಂದೆ ಓದಿ...












Click it and Unblock the Notifications