ದುಬೈ ರೇಪ್, ಹತ್ಯಾಕಾಂಡ ಬೆಳಕಿಗೆ ಬಂದಿದ್ದು ಹೇಗೆ?

ವಿಧಿ ವಿಜ್ಞಾನ ಪರಿಶೀಲನೆಯ ನಂತರ ಈ ಕೊಲೆ ಪ್ರಕರಣ ಮಧ್ಯಾಹ್ನ ಎರಡರಿಂದ ಸಂಜೆ ಆರೂವರೆ ಗಂಟೆಯೊಳಗೆ ನಡೆದ ಬಗ್ಗೆ ವರದಿ ಬಂದಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಅವರ ಮನೆಯ ಕೆಲಸದಾಳು ಮನು ಪವಾರ್ ಪರಾರಿಯಗಿರುವುದು ತಿಳಿದು ಬಂತು.
ಕೂಡಲೇ ಭಾರತೀಯ ಪೊಲೀಸರಿಗೆ ಮಾಹಿತಿ ರವಾನಿಸಲಾಗಿ ಜನವರಿ 8, 1992 ರಂದು ರವಿಜಿ ಪವಾರನನ್ನು ಆತನ ಗ್ರಾಮ ನವಸಿರಿಯಿಂದ ಬಂಧಿಸಲಾಗಿತ್ತು. ಅಪರಾಧ ನಡೆಸಿದ ದಿನದಂದೇ ಆರೋಪಿ ರವಿಜಿ ಅಹಮದಾಬಾದಿನಲ್ಲಿರುವ ವಲ್ಸದ್ ಜಿಲ್ಲೆಯ ಚಿಕ್ಲಿ ತಾಲೂಕಿನ ಗೋಲಾರದಲ್ಲಿರುವ ನವಸಿರಿ ಎಂಬ ಗ್ರಾಮಕ್ಕೆ ಓಡಿಬಂದಿದ್ದ. ದುಬೈನಿಂದ ಕರೆ ಬರುತ್ತಿದ್ದಂತೆ ಜನವರಿ 6ರಂದೇ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದರು.
ಈತನಿಂದ ಕೊಲೆ ನಡೆದ ಕುಟುಂಬಕ್ಕೆ ಸೇರಿದ್ದ ಹಲವು ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಅಹಮದಾಬಾದ್ ಸಿಬಿಐ ವಿಶೇಷ ನ್ಯಾಯಾಲಯ 53 ವರ್ಷದ ಈ ಪಾತಕಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಕಳೆದ ವಾರ ತೀರ್ಪು ನೀಡಿದೆ.












Click it and Unblock the Notifications