ರಜೆಯ ಇಮೇಲ್‌ಗೆ ಉತ್ತರಿಸದ ಬಾಸ್!‌ನೆಟ್‌ಫ್ಲಿಕ್ಸ್ ಸರಣಿಯಂತಹ ಟ್ರೇಲರ್ ಮೂಲಕ 10 ದಿನಗಳ ಲೀವ್‌ಗೆ ಅರ್ಜಿ ಹಾಕಿದ ಮಹಿಳೆ!

ಕಾರ್ಪೊರೇಟ್ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ರಜೆಯೇ ಒಂದು ದೊಡ್ಡ ಸಮಸ್ಯೆ. ಅನಾರೋಗ್ಯ, ಮದುವೆ ಅಥವಾ ತುರ್ತು ಮನೆಕೆಲಸಗಳಂತಹ ಕಾರಣಗಳು ಎದುರಾದಾಗ ರಜೆ ಹಾಕಲೇ ಬೇಕಾಗುತ್ತದೆ.ಆದರೆ ಈಗೀಗ ಇಂಥಹ ಕಾರಣಗಳಿಗೆ ರಜೆ ಸಿಗುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅನೇಕ ಕಂಪನಿಗಳಲ್ಲಿ ರಜೆಗಾಗಿ ಹಾಕಿದ ಇಮೇಲನ್ನು ಬಾಸ್‌ಗಳು ತೆರೆದು ಕೂಡಾ ನೋಡುವುದಿಲ್ಲ. ಹೀಗಿರುವಾಗ ರಜೆ ಬೇಕೇ ಬೇಕು ಎಂದಾದರೆ ಪಡೆಯುವುದಾದರೂ ಹೇಗೆ?

ಇಲ್ಲಿ ರಜೆಯ ಸಮಸ್ಯೆ ಎದುರಿಸುತ್ತಿದ್ದ ಮಹಿಳೆಯೊಬ್ಬರು ಹೊಸ ಐಡಿಯಾ ಮಾಡಿದ್ದಾರೆ. ಹೇಗಾದರೂ ಮಾಡಿ ರಜೆ ಪಡೆಯಲೇ ಬೇಕು ಎನ್ನುವ ಉದ್ದೇಶ ಅವರದ್ದು. ನೇರವಾಗಿ ಕೇಳಿದರೆ ಇಲ್ಲ ಎನ್ನುವ ಉತ್ತರವೇ ಬರುವುದು ಎನ್ನುವ ಸತ್ಯ ಮಹಿಳೆಗೂ ಗೊತ್ತಿತ್ತು. ಹಾಗಾಗಿ ೧೦ ದಿನಗಳ ಸುದೀರ್ಘ ರಜೆಗಾಗಿ ತಾಲಿಯಾ ಎನ್ನುವ ಮಹಿಳೆ ಹೂಡಿರುವ ಉಪಾಯ ಇದೀಗ ಸೋಶಿಯಲ್‌ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ. ಅವರು ರಜೆ ಕೋರಿರುವ ರೀತಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ ಎನ್ನಲಾಗುತ್ತಿದೆ. ತನ್ನ ಬಾಸ್‌ಗೆ ಇಮೇಲ್‌ ಕಳುಹಿಸಿದರೆ ಉತ್ತರ ಬರುವುದಿಲ್ಲ ಎನ್ನುವ ವಿಷಯ ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು. ಹಾಗಾಗಿ ಸರಳ ಇಮೇಲ್ ಅಥವಾ ಸಂದೇಶವನ್ನು ಕಳುಹಿಸುವ ಬದಲು, ನೆಟ್‌ಫ್ಲಿಕ್ಸ್ ವೆಬ್ ಸರಣಿಯ ಶೈಲಿಯಲ್ಲಿ "ರಜೆ ಟ್ರೇಲರ್ ವೀಡಿಯೊ"ವನ್ನು ರಚಿಸಿದ್ದಾರೆ. ಈ ವಿಡಿಯೋ ಟ್ರೇಲರ್‌ ಮೂಲಕ ಲೀವ್‌ಗಾಗಿ ಅರ್ಜಿ ಸಲಿಸಿದ್ದಾರೆ. ಈ ವೀಡಿಯೊ ಆನ್‌ಲೈನ್‌ನಲ್ಲಿ ಸಂಚಲನವನ್ನು ಸೃಷ್ಟಿಸುತ್ತಿದೆ.

Leave

ಸಿನಿಮೀಯ ಶೈಲಿಯಲ್ಲಿ ಪ್ರಾರಂಭವಾದ ರಜೆಯ ಕಥೆ:

ಈ ವಿಡಿಯೋ ಒಂದು ಸಸ್ಪೆನ್ಸ್ ವೆಬ್ ಸರಣಿಯಂತೆ ಆರಂಭವಾಗುತ್ತದೆ. ಕಳೆದ ಕೆಲವು ದಿನಗಳಿಂದ ತಾಲಿಯಾ ಯಾಕೆ ಇಷ್ಟೊಂದು ಅಸಮಾಧಾನಗೊಂಡಿದ್ದಾಳೆಂದು ಸಂದರ್ಶಕರೊಬ್ಬರು ಕೇಳುತ್ತಾರೆ. ಈ ಪ್ರಶ್ನೆಯನ್ನು ಕೇಳಿಯೂ ಮಹಿಳೆ ಉತ್ತರಿಸುವುದಿಲ್ಲ, ಗಂಭೀರವಾದ ಭಾವ ಆಕೆಯನ್ನು ಆವರಿಸಿಕೊಂಡಂತೆ ಕಾಣಿಸುತ್ತಾಳೆ. ಯಾವುದೋ ಮಹತ್ವದ ಸಂಗತಿ ಬಹಿರಂಗಗೊಳ್ಳಲಿದೆ ಎನ್ನುವಂತ ಸಸ್ಪೆನ್ಸ್‌ ಕ್ರಿಯೇಟ್‌ ಮಾಡಿದ್ದಾರೆ. ನಂತರ ವೀಡಿಯೊ ನಾಟಕೀಯ ಸಂಗೀತಕ್ಕೆ ಪರಿವರ್ತನೆಯಾಗುತ್ತದೆ. ಅಲ್ಲಿ ಕೆಲವು ವಿಡಿಯೋ ತುಣುಕುಗಳನ್ನು ಹಾಕಲಾಗಿದೆ. ತಾಲಿಯಾ ಕೆಲವೊಮ್ಮೆ ಮೌನವಾಗಿ ಕುಳಿತಿರುವುದನ್ನು ಮತ್ತು ಕೆಲವೊಮ್ಮೆ ಆಲೋಚನೆಯಲ್ಲಿ ಕಳೆದುಹೋಗಿರುವುದನ್ನು ಕಾಣಬಹುದು.

ಕೊನೆಯಲ್ಲಿ ಸಿಕ್ಕ ದೊಡ್ಡ ಟ್ವಿಸ್ಟ್‌:

ವಿಡಿಯೋ ಮುಂದುವರೆದಂತೆ, ತಾಲಿಯಾ ತಾನು ಬಹಳ ಸಮಯದಿಂದ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆ. ಆದರೆ ಈ ವಿಚಾರವನ್ನು ಹೇಳಲು ಧೈರ್ಯ ಇರಲಿಲ್ಲ ಎನ್ನುತ್ತಾ ಮಾತಿಗೆ ಇಳಿಯುತ್ತಾಳೆ. ತನ್ನ ಬಾಸ್‌ಗಳಾದ ಫ್ರಾಂಕ್ ಮತ್ತು ಜ್ಯಾಕ್ ಅವರ ಬಳಿ ಒಂದು ಪ್ರಶ್ನೆ ಕೇಳಬೇಕಿದೆ. ಅದೇನಂದರೆ ಬಾಲಿಗೆ ಹೋಗಿ ಆನಂದಿಸಲು ತನಗೆ 10 ದಿನಗಳ ರಜೆ ಬೇಕು, ಸಿಗುವುದೇ ಎಂದು ಕೇಳುತ್ತಾಳೆ. ಇದನ್ನು ನೋಡಿ ಬಾಸ್‌ಗಳು ಕೂಡಾ ನಗುತ್ತಾರೆ.

ಬಾಸ್ ಕೊಟ್ಟ ಉತ್ತರ:

ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿದ ಇಬ್ಬರೂ ಬಾಸ್‌ಗಳು, ತಮ್ಮ ಉತ್ತರಗಳನ್ನು ವೀಡಿಯೊ ಮೂಲಕವೇ ತಿಳಿಸಬೇಕೇ ಎಂದು ಪ್ರಶ್ನಿಸುತ್ತಾರೆ. ತಾಲಿಯಾ ಬೇಗನೆ "ಹೌದು ಎನ್ನುತ್ತಾ ಉತ್ತರ ಸಾಕ್ಷ್ಯಚಿತ್ರ ಟ್ರೇಲರ್ ಶೈಲಿಯಲ್ಲಿರಬೇಕು" ಎಂದು ಹೇಳಿದ್ದಾರೆ. ಆದರೆ ಮಹಿಳೆ ಇಷ್ಟೆಲ್ಲಾ ಶ್ರಮಪಟ್ಟ ನಂತರವೂ ಆಕೆಗೆ ರಜೆ ಸಿಕ್ಕಿತೇ ಇಲ್ಲವೇ ಎನ್ನುವುದು ಮಾತ್ರ ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಜನರ ಮೆಚ್ಚುಗೆ:

ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಜನರು ಕಾಮೆಂಟ್‌ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಒಬ್ಬ ಬಳಕೆದಾರರು ಈ ಹುಡುಗಿ ರಜೆಗೆ ಮಾತ್ರವಲ್ಲ, ಬಡ್ತಿಗೂ ಅರ್ಹಳು ಎಂದು ಬರೆದಿದ್ದಾರೆ. ಮತ್ತೊಬ್ಬರು ರಜೆ ಕೇಳಲು ತುಂಬಾ ಶ್ರಮಿಸುತ್ತಿರುವುದರಿಂದ, ಅವಳ ಬಾಸ್ ನಿರಾಕರಿಸಬಾರದು ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಚೇರಿ ವಾತಾವರಣವು ಒತ್ತಡದಿಂದ ಕೂಡಿದ್ದು, ಇಂಥ ಸನ್ನಿವೇಶಗಳ ಮೂಲಕ ವಾತಾವರಣವನ್ನು ಸ್ವಲ್ಪ ಹಗುರಾಗಿಸಬಹುದು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಕೆಲವು ಬಳಕೆದಾರರು ತಾವು ಕೂಡಾ ಮುಂದಿನ ಬಾರಿ ರಜೆ ಕೇಳುವಾಗ ಇಮೇಲ್ ಬದಲಿಗೆ ಟ್ರೇಲರ್ ಕಳುಹಿಸುತ್ತೇವೆ ಎಂದು ತಮಾಷೆ ಮಾಡಿದ್ದಾರೆ.

ಜನರಿಗೆ ವಿಶೇಷ ಸಂದೇಶ ನೀಡಿದ ವಿಡಿಯೋ:

ಈ ವೀಡಿಯೊ ಕೇವಲ ರಜೆ ಕೇಳುವ ಒಂದು ಮಾರ್ಗವಾಗಿರಲಿಲ್ಲ, ಸ್ವಲ್ಪ ಸೃಜನಶೀಲತೆಯಿಂದ ಸರಳವಾದ ವಿಷಯಗಳನ್ನು ಸಹ ವಿಶೇಷವಾಗಿಸಬಹುದು ಎಂದು ಜನರಿಗೆ ತೋರಿಸಿ ಕೊಟ್ಟಂತೆ ಇದೆ. ಅದಕ್ಕಾಗಿಯೇ ಈ ವೀಡಿಯೊ ಇಂಟರ್ನೆಟ್‌ನಲ್ಲಿ ಬೇಗನೆ ವೈರಲ್ ಆಗುತ್ತಿದ್ದು, ಜನರು ಇದನ್ನು ಇಷ್ಟಪಡುತ್ತಿದ್ದಾರೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+