ನಮ್ಮ ಮೆಟ್ರೋ ಸೆ.15ಕ್ಕೆ ಸಂಚಾರ ಆರಂಭ: ಡಿವಿಎಸ್

ನಗರದ ಪ್ರೆಸ್ ಕ್ಲಬ್ ನಲ್ಲಿ ಇಂದು(ಆ.24) ಬೆಳಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿವಿಎಸ್, ಪ್ರಧಾನಿ ಅವರು ಸೆಪ್ಟೆಂಬರ್ ಮೊದಲ ವಾರ ಬಾಂಗ್ಲಾದೇಶ ಪ್ರವಾಸ ಹೊರಡಲಿದ್ದಾರೆ. ಹಾಗಾಗಿ ಸೆ.15 ರಂದು ಬಿಎಂಆರ್ ಸಿಎಲ್ ಮೆಟ್ರೋ ರೈಲು ಉದ್ಘಾಟನೆಗೊಳ್ಳಲಿಸಲು ಅವರು ಒಪ್ಪಿಗೆ ನೀಡಿದ್ದಾರೆ ಎಂದರು.
ಬಿಎಂಆರ್ ಸಿಎಲ್ ಅಧಿಕಾರಿಗಳೋಡನೆ ಮಂಗಳವಾರ ಸದಾನಂದಗೌಡ ಅವರು ಚರ್ಚೆ ನಡೆಸಿದ್ದರು. ರೈಲ್ವೇ ಸುರಕ್ಷತಾ ನಿಯಮಗಳಿಗೆ ತಕ್ಕಂತೆ ಮೆಟ್ರೋವನ್ನು ಅಣಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಆದರೆ, ರೈಲ್ವೇ ಮಂಡಳಿಯಿಂದ ಇನ್ನೂ ಅನುಮತಿ ಪತ್ರ ಸಿಕ್ಕಿಲ್ಲ.
7.5 ಕಿ.ಮೀ ದೂರದ ಮೊದಲ ಹಂತದಲ್ಲಿ ಭೈಯಪ್ಪನಹಳ್ಳಿಯಿಂದ ಎಂಜಿ ರಸ್ತೆವರೆಗೂ ಮೆಟ್ರೋ ರೈಲು ಸಂಚರಿಸಲಿದೆ.












Click it and Unblock the Notifications