ಅಣ್ಣಾ ಉಪವಾಸ 9ನೇ ದಿನಕ್ಕೆ: ಆರೋಗ್ಯ ಸ್ಥಿತಿ ವಿಷಮ

ಹಿಂದಿನ ದಿನಗಳಿಗೆ ಹೋಲಿಸಿದರೆ ಅವರ ಆರೋಗ್ಯ ಕ್ಷೀಣಿಸಿದಂತೆ ಕಂಡು ಬಂದಿದೆ. 8ನೇ ದಿನದ ನಿರಶನ ಸಂದರ್ಭದಲ್ಲಿ ಅವರು- ಸಾಯಲು ತಾವು ಹೆದರುವುದಿಲ್ಲ ಎಂದಿದ್ದಾರೆ. ತಮ್ಮ ಕಿಡ್ನಿಗಳು ದುರ್ಬಲವಾಗಿದ್ದು ಡ್ರಿಪ್ಸ್ ಅಗತ್ಯವಿದೆ ಎಂದು ಹೇಳಲಾಗಿದೆ. ಆದರೆ ಸಲೈನ್ ಡ್ರಿಪ್ಸ್‌ಗೆ ನನ್ನ ಅಂತಃಪ್ರಜ್ಞೆ ಒಪ್ಪಿಗೆ ನೀಡಿಲ್ಲ ಎಂದು ತಿಳಿಸಿದ್ದಾರೆ.
'ಸರ್ಕಾರವೇನಾದರೂ ಬಲವಂತವಾಗಿ ನನ್ನನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೆ, ಅವರು ಇತ್ತ ಪ್ರವೇಶಿಸುವುದನ್ನೇ ತಡೆಯಿರಿ, ಆದರೆ ಹಿಂಸಾಚಾರ ಸಲ್ಲದು. ನಾನು ಸತ್ತರೆ ಅದು ದೊಡ್ಡ ವಿಷಯವೇನಲ್ಲ. ಅನೇಕ ಮಂದಿ ಅಣ್ಣಾಗಳು ಹೊರಹೊಮ್ಮುತ್ತಾರೆ' ಎಂದು ನೆರೆದಿದ್ದ ಜನರತ್ತ ಬೆರಳು ತೋರಿಸಿ ತಿಳಿಸಿದ್ದಾರೆ.
ಬಿಸಿಲಿನಿಂದ ದೂರವಿರುವಂತೆ ವೈದ್ಯರು ಅಣ್ಣಾಗೆ ಸಲಹೆ ನೀಡಿದ್ದಾರೆ. ಅಣ್ಣಾ ರಕ್ತದಲ್ಲಿ ಹಸಿವಿನಿಂದಾಗಿ ಉತ್ಪತ್ತಿಯಾದ ಕೆಟೋನ್ ಅಂಶ ಪತ್ತೆಯಾಗಿದೆ. ಇತರ ಎಲ್ಲ ಅಂಗಾಂಶಗಳು ಸುರಕ್ಷಿತವಾಗಿದೆ. ಅವರ ರಕ್ತದೊತ್ತಡ ಸಾಮಾನ್ಯವಿದ್ದು, ಕಣ್ಣಿನಲ್ಲಿ ನೀರಿನಂಶವಿದೆ. ಆದರೆ ಕೆಲವು ಆರೋಗ್ಯ ಕ್ಷೀಣತೆಯ ಲಕ್ಷಣಗಳು ಕಂಡುಬಂದಿವೆ ಎಂದು ವೈದ್ಯರು ಹೇಳಿದ್ದಾರೆ.












Click it and Unblock the Notifications