ಒಂದೇ ಕ್ಷಣದಲ್ಲಿ 800 ಕೋಳಿಗಳು ರಕ್ತಕಾರಿ ಸಾವು

ರಾಷ್ಟ್ರೀಯ ಹೆದ್ದಾರಿ 17ರಲ್ಲಿರುವ ಅಂಕೋಲಾ ತಾಲೂಕಿನ ಬೆಳಸೆ ಬಳಿ ಈ ದುರ್ಘಟನೆ ಸಂಭವಿಸಿದೆ. ವಾಹನ ಚಾಲಕನನ್ನು ಬೆಳಗಾವಿಯ ನಿವಾಸಿ ಇರ್ಷಾದ್(23) ಎಂದು ಗುರುತಿಸಲಾಗಿದೆ. ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಮವಾರ ಮಧ್ಯಾಹ್ನ 1.30ರ ಸುಮಾರಿಗೆ ಬೆಳಸೆ ಸಮೀಪದ ರಸ್ತೆಯಲ್ಲಿ ಜಾನುವಾರು ಅಡ್ಡ ಬಂದಾಗ ಅದನ್ನು ತಪ್ಪಿಸುವ ಯತ್ನದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು ರಸ್ತೆಯಲ್ಲಿ ವಾಹನ ಉರುಳಿ ಬಿದ್ದ ಪರಿಣಾಮ ಚಾಲಕನ ಎರಡು ಕೈಗಳಿಗೆ ಗಂಭೀರ ಪ್ರಮಾಣದ ಗಾಯವಾಗಿದೆ.
ಈ ದುರ್ಘಟನೆಯಲ್ಲಿ ಸುಮಾರು 800ಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿದ ದುಃಖದಲಿ ಇರ್ಷಾದ್ ಆಸ್ಪತ್ರೆಯಲ್ಲಿದ್ದರೆ, ಸುತ್ತ ಮುತ್ತಲಿನ ಪ್ರದೇಶದವರು ಮಾತ್ರ ಕೋಳಿ ಸಮಾರಾಧನೆ ನಡೆಸಿ ತೇಗಿದ್ದಾರೆ.












Click it and Unblock the Notifications