ಅಣ್ಣಾ ಕೂಗಿಗೆ ಓಗೊಡಬೇಡಿ, ಮುಸ್ಲಿಮರಿಗೆ ಕರೆ

'ವಂದೇ ಮಾತರಂ' ಮತ್ತು 'ಭಾರತ್ ಮಾತಾ ಕೀ ಜೈ' ಎಂದು ಘೋಷಣೆ ಕೂಗಿಗೆ ದನಿಗೂಡಿಸಬೇಡಿ. ಇಸ್ಲಾಂಗೆ ವಿರುದ್ಧ ವಾದ ಚಳವಳಿಯಲ್ಲಿ ಮುಸ್ಲಿಮರು ಭಾಗವಹಿಸಬಾರದು ಎಂದು ಸಯ್ಯದ್ ಅಹ್ಮದ್ ಬುಖಾರಿ ಮುಸ್ಲಿಮರಿಗೆ ಕರೆ ನೀಡಿದ್ದಾರೆ.
ಭೂಮಿ, ರಾಷ್ಟ್ರ,ತಾಯಿ ವ್ಯಕ್ತಿ ಪೂಜೆಯನ್ನು ಇಸ್ಲಾಂ ನಿಷೇಧಿಸಿದೆ. ಇಸ್ಲಾಂ ಆಶಯಕ್ಕೆ ವಿರುದ್ಧವಾದ ಚಳವಳಿ ಹಾಗೂ ಘೋಷಣೆಯಲ್ಲಿ ಮುಸ್ಲಿಮರು ತೊಡಗಿಕೊಳ್ಳುವುದು ಅಪರಾಧ ಎಂದು ಬುಖಾರಿ ಹೇಳಿದ್ದಾರೆ.
ಅಣ್ಣಾ ಅವರಿಗೆ ಆರೆಸ್ಸೆಸ್ ಮತ್ತು ಬಿಜೆಪಿ ಬೆಂಬಲವಿದೆ. ಇದೊಂದು ರಾಜಕೀಯ ಪ್ರೇರಿತ ಹೋರಾಟ ಅಷ್ಟೇ ಎಂದು ಬುಖಾರಿ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications