ಅಹ್ಮದಾಬಾದ್: ಪುತ್ರಿಯಿಂದಲೇ ತಂದೆಯ ಅಂತ್ಯಸಂಸ್ಕಾರ

ಇಲ್ಲಿನ ಮಣಿನಗರದಲ್ಲಿ ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟ ತಮ್ಮ ತಂದೆಯ ಅಂತ್ಯಸಂಸ್ಕಾರವನ್ನು ಅವರ ಮಗಳು ನಿಧಿಯೇ ನೆರವೇರಿಸಿದ್ದು ಎಲ್ಲರ ಗಮನ ಸೆಳೆದಿದ್ದಾರೆ. ಏಳು ವರ್ಷಗಳ ಹಿಂದೆ ತನ್ನ ತಾಯಿ ಭೈರವಿ ಅವರು ಸಾವನ್ನಪ್ಪಿದ್ದಾಗಲೂ ನಿಧಿ, ತಾನೇ ಮುಂದೆ ನಿಂತು ಆಕೆಯ ಅಂತ್ಯಸಂಸ್ಕಾರ ನಡೆಸಿದ್ದರು. ಹೆತ್ತವರಿಗೆ ಒಬ್ಬಳೇ ಮಗಳಾಗಿದ್ದ ನಿಧಿ ಈಗ ತಂದೆ ಸುಧೀರ್ ಥಾಕರ್ ಅಂತ್ಯಸಂಸ್ಕಾರ ನಡೆಸಿದ್ದಾರೆ.
'ನನ್ನ ಪತಿ ಮತ್ತು ನಾನು, ನನ್ನ ಹೆತ್ತವರೊಂದಿಗೇ ವಾಸಿಸುತ್ತಿದ್ದೆವು. ನನಗೆ ಕೂಡ ಒಂದು ವರ್ಷದ ಮಗಳಿದ್ದಾಳೆ. ನಾನು ಸತ್ತಾಗ ನನ್ನ ಮಗಳೇ ನನ್ನ ಅಂತ್ಯ ಸಂಸ್ಕಾರ ನಡೆಸಬೇಕು ಎಂದು ನಾನು ಬಯಸುತ್ತೇನೆ" ಎಂದೂ ನಿಧಿ ಹೇಳುತ್ತಾರೆ.
'ನನ್ನ ಹೆತ್ತವರು ಯಾವತ್ತೂ ಮಗು ಮತ್ತು ಮಗಳು ಎಂಬ ಬೇಧ ಹೊಂದಿರಲಿಲ್ಲ. ಅವರು ಜೀವಂತವಿದ್ದಾಗ, ಅವರು ನನಗೆ ಎಲ್ಲ ರೀತಿಯ ಪ್ರೀತಿ ಭರವಸೆಗಳನ್ನು ನೀಡಿ ಸಲುಹಿದ್ದಾರೆ. ಅವರಿಗೆ ನಾನೇ ಮಗ ಮತ್ತು ಮಗಳಾಗಿದ್ದೆ. ಹೀಗಾಗಿ ನನ್ನ ಹೆತ್ತವರ ಅಂತ್ಯಸಂಸ್ಕಾರ ನಡೆಸುವುದು ನನಗೆ ಸಹಜವೆನಿಸುತ್ತದೆ" ಎಂದು ನಿಧಿ ಹೇಳಿದ್ದಾರೆ.












Click it and Unblock the Notifications