ಯುಎಸ್ ನಲ್ಲಿ ಇಂಡೋ-ಪಾಕ್ ರಸಭರಿತ ಕದನ

Alphanso vs Chausa Mango
ವಾಷಿಂಗ್ಟನ್, ಆ.21: ಅಮೆರಿಕದ ಮಾವು ಮಾರುಕಟ್ಟೆಗೆ ಭಾರತ ಹಾಗೂ ಪಾಕಿಸ್ತಾನದ ಮಾವುಗಳ ತಳಿ ಲಗ್ಗೆ ಇಟ್ಟು ಮೂರು ವರ್ಷ ಕಳೆದಿರಬಹುದು. ಆದರೆ, ಉಭಯ ದೇಶಗಳಿಂದ ಆಮದಾಗಿರುವ 'ಹಣ್ಣುಗಳ ರಾಜ' ಮಾವು ಎರಡು ಜನಪ್ರಿಯ ತಳಿಗಳ ನಡುವೆ ಭಾರಿ ಪೈಪೋಟಿ ನಡೆದಿದೆ.

ಭಾರತದ ಅಲ್ಫೋನ್ಸಾ ಹಾಗೂ ಚಾಸಾ ವೆರೈಟಿ ಮಾವಿನ ಕದನದಿಂದ ಅಮೆರಿಕದಲ್ಲಿ ಭರ್ಜರಿ ಬೆಲೆಗೆ ಮಾವು ಬಿಕರಿಯಾಗುತ್ತಿದೆ. ಯುಎಸ್ ನಲ್ಲಿರುವ ಭಾರತ ಹಾಗೂ ಪಾಕಿಸ್ತಾನ ಅಂಗಡಿಗಳಲ್ಲಿ ಮಾವು ಸಿಗುವುದು ದುರ್ಲಭವಾಗಿದೆ. ಪರಿಸ್ಥಿತಿ ಹೀಗಿರುವಾಗ ಮಾಂಗ್ಯೊಜ್.ಕಾಂ ಮೂಲಕ ಮಾತ್ರ ಮಾವು ಖರೀದಿ ಸಾಧ್ಯವಾಗಿದೆ ಎಂದು ವೆಬ್ ಮಾಲೀಕ ಜೈದೇವ್ ಶರ್ಮ ಹೇಳುತ್ತಾರೆ.

ಆ.15ಕ್ಕೆ 800 ಬಾಕ್ಸ್ ಗಳಲ್ಲಿ ಪಾಕಿಸ್ತಾನಿ ಹಣ್ಣು ಯುಎಸ್ ನೆಲ ಮುಟ್ಟಿದೆ. ಮಾರುಕಟ್ಟೆ ತಲುಪುವ ಮುನ್ನವೇ ಯುಎಸ್ 60 ಡಾಲರ್ ನಿಂದ 100 ಡಾಲರ್ ತನಕ ಬೆಲೆ ಹೆಚ್ಚಿಸಿಕೊಂಡಿದೆ.

ಆಲ್ಫಾನ್ಸೋಗೆ ಎಚ್ಚರಿಕೆ:ಕಳೆದ ಕೆಲ ವರ್ಷಗಳಿಂದ ಯುಎಸ್ ಮಾರುಕಟ್ಟೆ ಆಳುತ್ತಿದ್ದ ಭಾರತದ ಅಲ್ಫಾನ್ಸೋಗೆ ಈ ಮೂಲಕ ಪಾಕ್ ನ ಚಾಸಾ ಎಚ್ಚರಿಕೆ ನೀಡಿದೆ. ಸುಮಾರು 3 ಕೆ.ಜಿ ಆಲ್ಫಾನ್ಸೊ ಮಾವು(9 ರಿಂದ 12 ಹಣ್ಣುಗಳಿರುತ್ತದೆ) ಬೆಲೆ ಸುಮಾರು 40 ಡಾಲರ್ ನಿಂದ 80 ಡಾಲರ್ ಬೆಲೆಯಂತೆ ಸಗಟು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿತ್ತು.

ಚಾಸಾ ಬೆಲೆ ಏರಿಕೆಯಾಗುತ್ತಿರುವುದನ್ನು ಗಮನಿಸಿದ ಪಾಕ್ ವರ್ತಕರು, ಈ ವಾರ ಚಿಕಾಗೋ ಏರ್ ಪೋರ್ಟ್ ತಲುಪುವ ಎರಡನೇ ಕಂತಿನ ಮಾವಿಗಾಗಿ ಕಾದು ಕೂತಿದ್ದಾರೆ. ಭಾರತದ ಅಲ್ಫಾನ್ಸೋ ಸೀಸನ್ ಮುಗಿದಿದ್ದು, ಆಮದು ಮಾಡಿಕೊಳ್ಳಲು ಬೇರೆ ಉತ್ತಮ ತಳಿ ಸಿಗುತ್ತಿಲ್ಲ. ಸೆ.15 ತನಕ ಚಾಸಾ ಬೆಳೆ ಸಿಗುವುದರಿಂದ ಈ ಬಾರಿ ಭಾರತದ ಮ್ಯಾಂಗೋಗೆ ಪಾಕ್ ಮ್ಯಾಂಗೋ ಸಡ್ಡು ಹೊಡೆಯುವುದು ಗ್ಯಾರಂಟಿ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+