ಮೋದಿ ಆಡಳಿತದಲ್ಲಿ ಲೋಕಾಯುಕ್ತರೇ ಇಲ್ಲ: ಹೈಕೋರ್ಟ್ ನೋಟಿಸ್

ಒಂದು ವರ್ಷದ ಹಿಂದೆ ಇದೇ ಹೈಕೋರ್ಟಿನ ಎದುರು ಅಮಿತ್ ಜೇತ್ವಾ ಎಂಬ ಮಾಹಿತಿ ಹಕ್ಕು ಕಾರ್ಯಕರ್ತನನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಅವರ ತಂದೆಯೇ (ಭಿಕಾ ಜೇತ್ವಾ) ಈಗ ಮೋದಿ ನಿಷ್ಕ್ರಯತೆಯನ್ನು ಪ್ರಸ್ತಾಪಿಸಿ ಲೋಕಾಯುಕ್ತ ನೇಮಕ ಅವಶ್ಯವೆಂದು ಹೇಳಿ ಹೈಕೋರ್ಟ್ ಕಟೆಕಟೆ ಹತ್ತಿರುವುದು. ಇನ್ನೂ ಆತಂಕದ ವಿಷಯವೆಂದರೆ ಲೋಕಾಯುಕ್ತ ನೇಮಕ ಪ್ರಕ್ರಿಯೆ ತಕ್ಷಣ ಕೈಗೆತ್ತಿಕೊಳ್ಳಲಾಗುವುದು ಎಂದು ಒಂದು ವರ್ಷದ ಹಿಂದೆಯೇ ಸರಕಾರ ಹೈಕೋರ್ಟಿಗೆ ಮುಚ್ಚಳಿಕೆ ಬರೆದುಕೊಟ್ಟಿತ್ತು. ಆದರೆ ...
ಕೈಗಾರಿಕೆಗಳಿಗೆ ಅಗ್ಗದ ಬೆಲೆಗೆ ಭೂಮಿ ಹಂಚಿಕೆ ಸೇರಿದಂತೆ ಹತ್ತಾರು ಭ್ರಷ್ಟಾಚಾರ ಆರೋಪಗಳು ಮೋದಿ ಮೇಲಿದ್ದರೂ, ಗುಜರಾತ್‌ನಲ್ಲಿ ಲೋಕಾಯುಕ್ತ ಸಂಸ್ಥೆಗೆ ಯಾವುದೇ ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಏಕೆಂದರೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಲೋಕಾಯುಕ್ತ ಹುದ್ದೆಗೆ ಮುಖ್ಯಸ್ಥರನ್ನೇ ನೇಮಕ ಮಾಡಿಲ್ಲ. ಸರಿಯಾಗಿ 7 ವರ್ಷಗಳಿಂದ ಗುಜರಾತ್ ಲೋಕಾಯುಕ್ತರ ಹುದ್ದೆ ಖಾಲಿ ಬಿದ್ದಿದೆ.
ಈ ಹಿನ್ನೆಲೆಯಲ್ಲಿ 1986ರ ಗುಜರಾತ್ ಲೋಕಾಯುಕ್ತ ಕಾಯ್ದೆ ಪ್ರಕಾರ, ಲೋಕಾಯುಕ್ತರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ವ್ಯಕ್ತಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿಯ ಆಧಾರದ ಮೇಲೆ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ಹೈಕೋರ್ಟ್, ಆ. 29ರೊಳಗೆ ಉತ್ತರ ನೀಡುವಂತೆ ಸೂಚಿಸಿದೆ. ಅಲ್ಲದೆ, ಲೋಕಾಯುಕ್ತ ನೇಮಕ ವಿಚಾರ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವಂತೆಯೂ ನಿರ್ದೇಶನ ನೀಡಿದೆ.












Click it and Unblock the Notifications