ಶ್ರೀಮಂತ ಸಂಸದ ಜಗನ್ ಮೇಲೆ ಸಿಬಿಐ ದಾಳಿ

ಆಕ್ರಮ ಆಸ್ತಿ ತನಿಖೆ ನಡೆಸುತ್ತಿರುವ ಸಿಬಿಐನ 20 ಜನರ ತಂಡ ಭಾರತದಾದ್ಯಂತ ಇರುವ ಜಗನ್ ಆಸ್ತಿ ಮೇಲೆ ದಾಳಿ ನಡೆಸುತ್ತಿದೆ. ಭಾರತೀಯ ಅತ್ಯಂತ ಶ್ರೀಮಂತ ಸಂಸದ ಎನಿಸಿರುವ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ತಂದೆ ವೈ ಎಸ್ ರಾಜಶೇಖರ್ ರೆಡ್ಡಿ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಒಟ್ಟು ಮಾಡಿರುವ ಸಮಸ್ತ ಆಸ್ತಿ ವಿವರಗಳನ್ನು ಹೊರಗೆಳೆಯುವಂತೆ ಸಿಬಿಐಗೆ ಸ್ಥಳೀಯ ಹೈಕೋರ್ಟ್ ಆದೇಶ ನೀಡಿತ್ತು.
ಜಗನ್ ಒಡೆತನದ ಸಾಕ್ಷಿ ಟಿವಿ ಕಚೇರಿ, ಐಎಎಸ್ ಅಧಿಕಾರಿ ಬಿವಿ ಆಚಾರ್ಯ ಅವರ ಮನೆ ಮೇಲೂ ದಾಳಿ ನಡೆದಿದೆ. ಸಿಬಿಐ ದಾಳಿ ಹಾಗೂ ಬಂಧನದ ನಿರೀಕ್ಷೆಯಲ್ಲಿದ್ದ ಜಗನ್, ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಆಂಧ್ರದ ಜವಳಿ ಸಚಿವ ಪಿ ಶಂಕರ್ ರಾವ್ ಅವರು ವೈಎಸ್ ಜಗನ್ ಅವರ ಅಕ್ರಮ ಆಸ್ತಿ ಗಳಿಕೆ ಬಗ್ಗೆ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. 11 ಲಕ್ಷ ದಿಂದ 43,000 ಕೋಟಿ ರು ತನಕ ಆಸ್ತಿ ಹೆಚ್ಚಿಸಿಕೊಂಡ ಜಗನ್ ಯಾವ ಮ್ಯಾಜಿಕ್ ಮಾಡಿ ಹಣ ದ್ವಿಗುಣ ಗಳಿಸಿದರು ಎಂದು ಆಂಧ್ರದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.












Click it and Unblock the Notifications