ವೆಬ್‌ಸೈಟ್ ವೇಶ್ಯಾವಾಟಿಕೆ: ದುಬೈ ಯುವತಿಯ ಬಂಧನ

ಮೊದಲು ವೇಶ್ಯಾವಾಟಿಕೆಯೊಂದರಲ್ಲಿ ವೇಶ್ಯೆಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ವಿಚಾರಣೆಯ ವೇಳೆ ನ್ಯಾಯಾಲಯದ ದಿಕ್ಕು ತಪ್ಪಿಸಲು ಯುವತಿ ಯತ್ನಿಸಿದಳಾದರೂ ಪೊಲೀಸರು ಬಲವಾದ ಸಾಕ್ಷ್ಯಗಳನ್ನು ಒದಗಿಸಿದ್ದರಿಂದ, ವೆಬ್‌ಸೈಟ್ ಮೂಲಕ ಸ್ವತಃ ತಾನೇ ವೇಶ್ಯಾವಾಟಿಕೆ ನಡೆಸುತ್ತಿರುವುದನ್ನು ಯುವತಿ ಒಪ್ಪಿಕೊಂಡಿದ್ದಾಳೆ ಎಂದು 'ಗಲ್ಫ್ ನ್ಯೂಸ್' ಪತ್ರಿಕೆ ವರದಿ ಮಾಡಿದೆ.
ಕಾರ್ಯಾಚರಣೆ: 'ಮಹಿಳೆಯೊಬ್ಬಳು ಅರೇಬಿಕಾ ಮತ್ತು ಇಂಗ್ಲಿಷಿನಲ್ಲಿ ಸುಲಲಿತವಾಗಿ ಮಾತನಾಡುತ್ತಾ ವೆಬ್‌ಸೈಟ್/ ಯೂಟ್ಯೂಬ್ ಸೆಕ್ಸ್ ದಂಧೆ ನಡೆಸುತ್ತಿದ್ದಾಳೆ' ಎಂಬ ಸುಳಿವು ಸಿಕ್ಕಿದ್ದೇ ತಡ ಪೊಲೀಸರು ಸ್ವಯಂ ಕಾರ್ಯಾಚರಣೆಗೆ ಇಳಿದು ಮಹಿಳೆಯನ್ನು ಬಂಧಿಸಿದ್ದಾರೆ.
ಯುವತಿಯು ತನ್ನ ವಿಚಾರಣೆಗೆ ಪೊಲೀಸರು ಬಂದಿದ್ದಾರೆ ಎಂಬುದನ್ನು ಅರಿಯದೆ ಮುಗ್ಧಳಾಗಿ ಪೊಲೀಸಪ್ಪನ ಜತೆ ಚಕ್ಕಂದಕ್ಕೆ ಹೂಗುಟ್ಟಿದ್ದಾಳೆ. ಅದರಂತೆ ದುಬೈ ಮೀಡಿಯಾ ಸಿಟಿಯಲ್ಲಿರುವ ಐಷಾರಾಮಿ ಹೋಟೆಲಿನಲ್ಲಿ ಭೇಟಿಯಾಗೋಣ ಎಂದು ಪೊಲೀಸಪ್ಪ ಸೂಚಿಸಿದ್ದಾನೆ.
ಹೋಟೆಲಿಗೆ ತಲುಪುತ್ತಿದ್ದಂತೆ ಹಣ ಪಡೆದು ಗ್ರಾಹಕನ ರೂಪದಲ್ಲಿದ್ದ ಪೊಲೀಸಪ್ಪನ ಮುಂದೆ ಯುವತಿ ನಗ್ನಳಾಗತೊಡಗಿದಳು. ಇದೇ ವೇಳೆ, ಪಕ್ಕದಲ್ಲಿ ರೂಮುಗಳಲ್ಲಿ ಹೊಂಚಿ ಹಾಕುತ್ತಿದ್ದ ಮಹಿಳಾ ಪೊಲೀಸರು ರೂಮಿನೊಳಕ್ಕೆ ನುಗ್ಗಿ ಯುವತಿಯನ್ನು ವಶಕ್ಕೆ ತೆಗೆದುಕೊಂಡಾಗಲೇ ಬಂದವ ಗಿರಾಕಿಯಲ್ಲ; ಪೊಲೀಸಪ್ಪ ಎಂದು ಅವಳಿಗೆ ಗೊತ್ತಾಗಿದ್ದು!












Click it and Unblock the Notifications