ವಿದ್ಯಾರ್ಥಿನಿಯನ್ನು ರೇಪ್ ಮಾಡಿದ ಕಾಲೇಜು ಅಧ್ಯಕ್ಷನ ಬಂಧನ
ನಾಗರಕೋಯಿಲ್,
ಆಗಸ್ಟ್ 16: ತನ್ನದೇ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಕಾಲೇಜು ಅಧ್ಯಕ್ಷನನ್ನು ಬಂಧಿಸಲಾಗಿದೆ. id="toptextpromo">18
ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯನ್ನು ಆಗಸ್ಟ್ 11ರಂದು ಎರಡು ಬಾರಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ಇಲ್ಲಿನ ಖಾಸಗಿ ಅರೆ ವೈದ್ಯಕೀಯ ಕಾಲೇಜಿನ ಅಧ್ಯಕ್ಷ ಅಶೋಕ್ ಕುಮಾರನನ್ನು (59) ಪೊಲಸರು ಸೋಮವಾರ ಬಂಧಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆ.
11ರಂದು ಮಧ್ಯಾಹ್ನ ಯಾರೂ ಇಲ್ಲದಿದ್ದಾಗ ತನ್ನನ್ನು ಬಾಯ್ಸ್ ಹಾಸ್ಟೆಲಿಗೆ ಕರೆದೊಯ್ದು ಅಶೋಕ್ ರೇಪ್ ಮಾಡಿದ. ಬಳಿಕ ಗರ್ಲ್ಸ್ ಹಾಸ್ಟೆಲ್ ಸಮೀಪ ರಾತ್ರಿ 9.30ರಲ್ಲಿ ಮತ್ತೊಮ್ಮೆ ಅತ್ಯಾಚಾರವೆಸಗಿದ ಎಂದು ಬಾಧಿತ ವಿದ್ಯಾರ್ಥಿನಿ ದೂರು ನೀಡಿದ್ದಳು. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ ಬಾಧಿತಳ ಮೇಲೆ ಸತತವಾಗಿ ಮಾನಭಂಗ ನಡೆದಿರಬಹುದು ಎನ್ನಲಾಗಿದೆ. ಅತ್ಯಾಚಾರ ಪ್ರಕರಣದ ಇತರೆ ಮುಖಗಳನ್ನು ತನಿಖೆ ಮಾಡುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.











Click it and Unblock the Notifications