ಅಕ್ರಮ ಗಣಿಗಾರಿಕೆ: ಕರ್ನಾಟಕಕ್ಕಿಂತ ಮಹಾರಾಷ್ಟ್ರ ಮುಂದು

Illegal Mining cases : Maharashtra tops
ನವದೆಹಲಿ ಆ.14: ದೇಶದಲ್ಲಿ ಅಕ್ರಮ ಗಣಿಗಾರಿಕೆಗಳ ಪ್ರಕರಣಗಳು ಏರಿಕೆ ದಾಖಲಿಸಿದ್ದು 2010ರಲ್ಲಿ ಒಟ್ಟು 82,330 ಪ್ರಕರಣಗಳನ್ನುಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂದು ಗಣಿ ಸಚಿವಾಲಯ ತಿಳಿಸಿದೆ. 2009 ರ ಅವಧಿಯಲ್ಲಿ ಅಕ್ರಮ ಗಣಿಗಾರಿಕೆಗಳ ಒಟ್ಟು 41,578 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು ಎಂದು ರಾಜ್ಯಸಭೆಗೆ ಗಣಿ ಸಚಿವ ದಿನೇಶ ಪಟೇಲ್ ತಿಳಿಸಿದ್ದಾರೆ.

2011ರ ಜನವರಿ- ಮಾರ್ಚ್ ತಿಂಗಳುಗಳಲ್ಲಿ ಅಧಿಕಾರಿಗಳು 24,405 ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಗಣಿ ಸಚಿವ ಪಟೇಲ್ ಅವರು ಲಿಖಿತ ಉತ್ತರದ ರೂಪದಲ್ಲಿ ತಿಳಿಸಿದ್ದಾರೆ.

2010 ರಲ್ಲಿ ಮಹಾರಾಷ್ಟ್ರದಲ್ಲಿ ಅತ್ಯಧಿಕ ಸಂಖ್ಯೆಯ ಪ್ರಕರಣಗಳು ವರದಿಯಾಗಿದ್ದು ಒಟ್ಟು 34,384 ಪ್ರಕರಣಗಳು ದಾಖಲಾಗಿದ್ದು ಇದು ದೇಶದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಶೇ 41.64 ರಷ್ಟಾಗಿದೆ ಎಂದು ಅವರು ಹೇಳಿದರು.

ಮಹಾರಾಷ್ಟ್ರದ ಈ ಪ್ರಕರಣಗಳು 2009ಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಅಧಿಕವಾಗಿವೆ ಎಂದು ಹೇಳಿದ ಅವರು 2009 ರಲ್ಲಿ ಒಟ್ಟು 8,270 ಪ್ರಕರಣಗಳು ದಾಖಲಾಗಿದ್ದವು ಎಂದರು.

ಅಕ್ರಮ ಗಣಿಗಾರಿಕೆ ಪ್ರಕರಣಗಳು ಕರ್ನಾಟಕದಲ್ಲಿ 2010 ರಲ್ಲಿ 2.93 ಪಟ್ಟು ಹೆಚ್ಚಾಗಿವೆ ಎಂದು ಹೇಳಿದ ಅವರು, ಆಂಧ್ರ ಪ್ರದೇಶದಲ್ಲಿ 1.54 ಪಟ್ಟು ಹಾಗೂ ಚತ್ತೀಸ್ ಘಡದಲ್ಲಿ 2.79 ಪಟ್ಟು ಹೆಚ್ಚಾಗಿದೆ.

ಮೇಲಿನ ನಾಲ್ಕು ರಾಜ್ಯಗಳು ದೇಶದಲ್ಲಿ ವರದಿಯಾಗಿರುವ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಶೇ 73 ರಷ್ಟು ಪಾಲು ಹೊಂದಿದ್ದು ಒಟ್ಟು 60,057 ಪ್ರಕರಣಗಳು ದಾಖಲಾಗಿವೆ ಎಂದು ಪಟೇಲ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+