ಆ.17 ರಿಂದ ಬೆಂಗಳೂರಿನಲ್ಲಿ ಆಧಾರ್ ಅರ್ಜಿ ಪಡೆಯಿರಿ

ನೋಂದಣಿ ಕಾರ್ಯವನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ ಎಂದು ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಮುಂದಿನ 30 ದಿನಗಳಲ್ಲಿ ಆಧಾರ್ ಗುರುತಿನ ಚೀಟಿ ವಿತರಿಸಲಾಗುವುದು.ಮೈಸೂರು ಮತ್ತು ತುಮಕೂರಿನಲ್ಲಿ ಶೇ.95ರಷ್ಟು ಕಾರ್ಯ ಮುಗಿದಿದೆ.
ಅರ್ಜಿ ಸಿಗುವ ಸ್ಥಳ: ಪಾಲಿಕೆ ವ್ಯಾಪ್ತಿಯ ಸಮುದಾಯ ಭವನ, ಬೆಂಗಳೂರು ಒನ್ ಕೇಂದ್ರಗಳು, ಕಾರ್ಪೋರೇಟ್ ಸಂಸ್ಥೆಗಳ ಆವರಣದಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೆ ನೋಂದಣಿ ಕಾರ್ಯ ನಡೆಯುತ್ತದೆ. ವಿಮಾನನಿಲ್ದಾಣ, ಜೆಪಿ ನಗರ 1ನೇ ಹಂತದ ಬೆಸ್ಕಾಂ ಕಚೇರಿ, ವಿಜಯನಗರ ಬಿಡಿಎ ಕಚೇರಿ, ಮಲ್ಲೇಶ್ವರಂ ಬಿಡಬ್ಲ್ಯೂಎಸ್ ಎಸ್ ಬಿ ಕಟ್ಟಡ, ಕೋರಮಂಗಲ ಪಾಸ್ ಪೋರ್ಟ್ ಕಟ್ಟಡ ಕಚೇರಿಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ನಡೆಯಲಿದೆ ಎಂದು ವಿದ್ಯಾಶಂಕರ್ ತಿಳಿಸಿದರು.
ನೋಂದಣಿ ಶುಲ್ಕ ಇಲ್ಲ: ವಯೋವೃದ್ಧರಾದಿಯಾಗಿ ಎಲ್ಲರೂ ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಯಾವುದೇ ಅರ್ಜಿ ಅಥವಾ ನೋಂದಣಿ ಶುಲ್ಕ ಪಡೆಯಲಾಗುತ್ತಿಲ್ಲ. ಒತ್ತಡದ ಪ್ರದೇಶಗಳಲ್ಲಿ ಟೋಕನ್ ವ್ಯವಸ್ಥೆ ಸಹ ಇರಲಿದೆ. ಪಡಿತರ ಚೀಟಿ, ಪಾಸ್‌ಪೋರ್ಟ್, ಮತದಾರ ಗುರುತಿನ ಚೀಟಿ, ಚಾಲನ ಪರವಾನಿಗೆ, ಬ್ಯಾಂಕ್ ಖಾತೆಗಳ ಪೈಕಿ ಯಾವುದಾದರೂ ಮೂಲ ದಾಖಲೆಗಳನ್ನು ಹಾಜರುಪಡಿಸಿ ನೋಂದಣಿ ಮಾಡಿಸಬಹುದು
ಮಾಧ್ಯಮದವರಿಗೆ ಸೌಲಭ್ಯ: ಮಾಧ್ಯಮದವರ ಅನುಕೂಲಕ್ಕಾಗಿ ಪ್ರೆಸ್‌ಕ್ಲಬ್ ಆವರಣದಲ್ಲಿ ನೋಂದಣಿ ವ್ಯವಸ್ಥೆ ಮಾಡಲಾಗಿದೆ. ಆ.11 ರಿಂದ 15ರವರೆಗೆ ಈ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ ಈ ಸೌಲಭ್ಯ ಇರುತ್ತದೆ ಎಂದು ವಿದ್ಯಾಶಂಕರ್ ವಿವರಿಸಿದರು.












Click it and Unblock the Notifications