ಕೆಂಪುಕೋಟೆ ದಾಳಿಕೋರ ಲಷ್ಕರೆ ಉಗ್ರನಿಗೆ ಗಲ್ಲು ಖಚಿತ

red-fort-let-terrorist-death-sentence-upheld
ನವದೆಹಲಿ, ಆಗಸ್ಟ್ 11: ಮೂವರನ್ನು ಬಲಿ ತೆಗೆದುಕೊಂಡ 2000ದ ಕೆಂಪು ಕೋಟೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ್- ಎ- ತೊಯ್ಬಾ ಉಗ್ರ ಮೊಹಮ್ಮದ್ ಆರಿಫ್ ಅಲಿಯಾಸ್ ಅಶ್ಫಾಕ್‌ಗೆ ವಿಧಿಸಿರುವ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಬುಧವಾರ ಎತ್ತಿಹಿಡಿದಿದೆ.

'ಈ ದಾಳಿಯು ಭಾರತದಲ್ಲಿ ಭಯ ಹುಟ್ಟಿಸಲು ಪಾಕಿಸ್ತಾನ ನಡೆಸಿದ ನಿರ್ಲಜ್ಜ ಕೃತ್ಯ' ಎಂದು ಸುಪ್ರೀಂಕೋರ್ಟ್ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದೆ. ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ಪ್ರಶ್ನಿಸಿ ಅಶ್ಫಾಕ್ ಕಳೆದ ಏಪ್ರಿಲ್ 20ರಂದು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.

17ನೇ ಶತಮಾನದ ಕೆಂಪುಕೋಟೆಯ ಒಳಗೆ ನುಗ್ಗಿ, ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಆರು ಉಗ್ರರಲ್ಲಿ ಅಶ್ಫಾಕ್ ಸಹ ಒಬ್ಬ. ಈ ಸಂದರ್ಭದಲ್ಲಿ ಒಬ್ಬ ನಾಗರಿಕ ಹಾಗೂ ಕಟ್ಟಡದ ರಕ್ಷಣೆಗಿದ್ದ ಇಬ್ಬರು ಸೈನಿಕರು ಮೃತರಾಗಿದ್ದರು.

ಗಲ್ಲು ಶಿಕ್ಷೆಗೆ ಗುರಿಯಾಗಿರುವ ಸಿಖ್ ಉಗ್ರ ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ಹಾಗೂ ಅಸ್ಸಾಂನ ಮಹೇಂದ್ರನಾಥ್ ದಾಸ್‌ನ ಕ್ಷಮಾದಾನ ಅರ್ಜಿಗಳನ್ನು ಎರಡು ತಿಂಗಳ ಹಿಂದೆಯಷ್ಟೇ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ತಿರಸ್ಕರಿಸಿದ್ದರು.

ಗಲ್ಲು ಶಿಕ್ಷೆಗೆ ಕ್ಷಮಾದಾನ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದ ನಿರ್ಧಾರವನ್ನು ರಾಷ್ಟ್ರಪತಿಯವರ ಪರವಾಗಿ ಕೇಂದ್ರ ಗೃಹ ಸಚಿವಾಲಯವೇ ತೆಗೆದುಕೊಳ್ಳುತ್ತದೆ ಎನ್ನುವುದು ಗಮನಾರ್ಹ ವಿಷಯ. ಇದೀಗ ರಾಷ್ಟ್ರಪತಿ ಅವರು ಗುರು ಪ್ರಕರಣದಲ್ಲಿ ಒಂದೋ ಕ್ಷಮಾದಾನಕ್ಕೆ ಒಪ್ಪಿಗೆ ನೀಡಬಹುದು ಅಥವಾ ಇದನ್ನು ಪರಿಶೀಲನೆಗೆಂದು ತಮ್ಮ ಬಳಿಯೇ ಇಟ್ಟುಕೊಳ್ಳಬಹುದು.

ಈ ಹಿಂದೆ ಗೃಹ ಸಚಿವಾಲಯವು ಕ್ಷಮಾದಾನ ಕೋರಿ 20 ಅಪರಾಧಿಗಳು ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿತ್ತು. ಅಲ್ಲದೆ ಇವರೆಲ್ಲರ ಹೆಸರುಗಳನ್ನು ಗಲ್ಲು ಶಿಕ್ಷೆಗೆ ಶಿಫಾರಸು ಮಾಡಿತ್ತು. ಆದರೆ ಆಗಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+