ಅಫ್ಝಲ್‌ಗೆ ಗಲ್ಲು ಸರಿಯಷ್ಟೇ, ಆದರೆ ಇದು ಸಕಾಲವಲ್ಲ ಗುರು

'ಕಳೆದ ವರ್ಷ ಭಾರಿ ಹಿಂಸಾಚಾರಕ್ಕೆ ತುತ್ತಾಗಿದ್ದ ಕಾಶ್ಮೀರ ಈಗಷ್ಟೇ ಶಾಂತಿಯತ್ತ ಹೊರಳುತ್ತಿದೆ. ಇಂತಹ ಸಂದರ್ಭದಲ್ಲಿ ಅಫ್ಝಲ್‌ಗೆ ಗಲ್ಲು ವಿಧಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವುದು ಸಮಂಜಸವಲ್ಲ. ಸದರಿಂದ ಮತ್ತೆ ಸಮಸ್ಯೆಗಳು ಉದ್ಭವವಾಗಲಿವೆ' ಎಂದು ಪಡಗಾವನ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಅಫ್ಝಲ್‌ಗೆ ಗಲ್ಲು : ಸಂಸತ್ ಭವನದ ಮೇಲೆ ದಾಳಿ ನಡೆಸಿದ ಕಾರಣಕ್ಕೆ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಅಫ್ಜಲ್ ಗುರು ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸುವಂತೆ ಗೃಹ ಸಚಿವಾಲಯವು ಬುಧವಾರ ರಾಷ್ಟ್ರಪತಿಗೆ ಶಿಫಾರಸು ಮಾಡಿದೆ.
'ಕ್ಷಮಾದಾನ ಕೋರಿ ಅಫ್ಜಲ್ ಸಲ್ಲಿಸಿದ ಮನವಿಗೆ ಸಂಬಂಧಿಸಿದ ಪ್ರಕರಣವನ್ನು ಗೃಹ ಸಚಿವಾಲಯವು ಕಳೆದ ತಿಂಗಳ 27ರಂದು ರಾಷ್ಟ್ರಪತಿ ಕಾರ್ಯಾಲಯಕ್ಕೆ ಕಳುಹಿಸಿದೆ' ಎಂದು ಗೃಹ ಖಾತೆ ರಾಜ್ಯ ಸಚಿವ ಮುಲ್ಲಪಲ್ಲಿ ರಾಮಚಂದ್ರನ್ ಬುಧವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
2001ರ ಡಿಸೆಂಬರಿನಲ್ಲಿ ಸಂಸತ್ ಭವನದ ಮೇಲೆ ದಾಳಿ ನಡೆಸಲು ಪಿತೂರಿ ಹೂಡಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಫ್ಝಲ್‌ಗೆ 2004ರಲ್ಲಿ ಮರಣದಂಡನೆ ವಿಧಿಸಿದೆ. ಮರಣ ದಂಡನೆಯನ್ನು 2006 ಅ. 20ರಂದು ಜಾರಿಗೊಳಿಸುವಂತೆ ಅದು ಆದೇಶಿಸಿತ್ತು. ಆದರೆ, ಆತನ ಪತ್ನಿ ಸಲ್ಲಿಸಿರುವ ದಯಾಭಿಕ್ಷೆ ಅರ್ಜಿ ಇತ್ಯರ್ಥ ವಿಳಂಬದಿಂದಾಗಿ ಅಫ್ಝಲ್ ಇನ್ನೂ ಜೀವಂತವಾಗಿದ್ದಾನೆ.












Click it and Unblock the Notifications