LPG ಸಂಪರ್ಕ ಅಕ್ರಮವಾದರೆ ಏಜೆನ್ಸಿಯೇ ಹೊಣೆ!

ಗ್ರಾಹಕ ಕೊಟ್ಟ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಅನಂತರವಷ್ಟೆ ವಿತರಕ ಸಂಸ್ಥೆ ಅನಿಲ ಸಂಪರ್ಕ ಒದಗಿಸುತ್ತದೆ. ಬಳಕೆದಾರ ಪಡೆದ ಗ್ಯಾಸ್ ಸಂಪರ್ಕಕ್ಕೆ ಬೆಲೆ ತೆತ್ತು ರಶೀದಿ ಪಡೆಯುವಾಗ ಅದು ಅಕ್ರಮ ಸಂಪರ್ಕ ಹೇಗಾಗುತ್ತದೆ ? ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಯಾವುದೇ ದಾಖಲೆಗಳು (ಬಳಕೆದಾರರ) ಬೇಕಿದ್ದರೆ ವಿತರಕರಿಂದ ಪಡೆಯಬೇಕೇ ಹೊರತೂ, ನೇರವಾಗಿ ಬಳಕೆದಾರರಿಂದಲ್ಲ.
ಇನ್ನು ಅಹಾರ ವೆಬ್ ಸೈಟ್ ಬಳಸಿ ದಾಖಲೆ ತುಂಬುವ ಗೋಜಲಿನ ಕೆಲಸದ ಹೊರೆ ಗ್ರಾಹಕರಿಗೆ ಏಕೆ ಹೊರೆಸುತ್ತಿರಾ? ಎಷ್ಟು ಜನಕ್ಕೆ ಇದು ಗೊತ್ತಿದೆ. ತಾಲೂಕು ಕಚೇರಿ ಸಹಾ ಎಲ್ಲಿದೆ ಎಂದು ತಿಳಿದಿರುವುದಿಲ್ಲ.
ಹಾಗೇ ಪಡೆದ ದಾಖಲೆ ಸರಿಯಿಲ್ಲದಿದ್ದರೆ ಅಥವಾ ದಾಖಲೆ ಸಿಗದಿದ್ದರೆ, ಆಗ ಬಳಕೆದಾರರ ಸಂಪರ್ಕಕ್ಕೆ ಸಬ್ಸಿಡಿ ನಿಲ್ಲಿಸಬಹುದೇ ಹೊರತು ಗ್ಯಾಸ್ ಸಂಪರ್ಕ ಅಮಾನತುಗೊಳಿಸುವಂತಿಲ್ಲ.
ಸ್ವಾಮಿ, ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅನಿಲ ಸಂಪರ್ಕ ಜೋಡಣೆಯನ್ನು ರದ್ದುಪಡಿಸಿದರೆ ವಿತರಕರ ಮೇಲೆ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳ ಮೇಲೆ ಬಳಕೆದಾರರ ರಕ್ಷಣಾ ಕಾಯಿದೆ 1986ರಂತೆ ಗ್ರಾಹಕ ದೂರು ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಬಹುದು ಹಾಗೂ ಕಾನೂನು ಕ್ರಮ ಜರುಗಿಸಬಹುದು.












Click it and Unblock the Notifications