ಚಲಿಸುವ ಕಾರಿನಲ್ಲಿ ದಲಿತೆ ಮೇಲೆ ಗ್ಯಾಂಗ್ ರೇಪ್

14 ವರ್ಷ ವಯಸ್ಸಿನ ಹುಡುಗಿ ಮೇಲೆ ಚಲಿಸುವ ಕಾರಿನಲ್ಲಿ ಸಾಮೂಹಿಕ ಮಾನಭಂಗ ನಡೆದಿದೆ. ಶೆಬು ಹಾಗೂ ಛೋಟು ಎಂಬ ಹೆಸರಿನ ಆರೋಪಿಗಳನ್ನು ಉತ್ರಾನ್ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ.
ಮೂರನೇ ಆರೋಪಿ ನಾಪತ್ತೆಯಾಗಿದ್ದಾನೆ. ಅತ್ಯಾಚಾರಗೈದ ಮೇಲೆ ಪಕ್ಕದ ಹಳ್ಳಿಯಲ್ಲಿ ಆರೋಪಿಗಳು ಬಚ್ಚಿಟ್ಟುಕೊಂಡಿದ್ದರು ಎಂದು ಅಲಹಾಬಾದ್ ಡಿಐಜಿ ರಾಜ್ ಕುಮಾರ್ ಕುರಿಲ್ ಹೇಳಿದ್ದಾರೆ.
ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಶಾಲೆಯಿಂದ ಹೊರಗಡೆ ಇರುವ ಅಂಗಡಿ ಬಂದು ಪೆನ್ಸಿಲ್ ಕೊಳ್ಳಲು ಹೊರಟ್ಟಿದ್ದ ಹುಡುಗಿಯನ್ನು ಈ ಗ್ಯಾಂಗ್ ಕಾರಿನಲ್ಲಿ ಎತ್ತಿಹಾಕಿಕೊಂಡು ಹೋಗಿದೆ. ನಿರ್ಜನ ಪ್ರದೇಶದತ್ತ ಕಾರು ಸಾಗುತ್ತಿದ್ದಂತೆ ಆಕೆ ಮೇಲೆ ಅತ್ಯಾಚಾರ ಎಸೆಗಿದ್ದಾರೆ ಎಂದು ಠಾಣಾಧಿಕಾರಿ ಬಲಿರಾಮ್ ಮಿಶ್ರಾ ಹೇಳಿದ್ದಾರೆ.












Click it and Unblock the Notifications