ಅನೈತಿಕ ಸಂಬಂಧ : ಹೆಂಡತಿಯ ಹತ್ಯೆಗೈದ ಗಂಡ

ಹತ್ಯೆಯಾಗಿರುವ ಅಲಿಮಾಬೀ (40) ಕಾಸೀಂ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನ್ನು ಸಹಿಸದ ಗಂಡ ಮೆಹಬೂಬ್ ಮಧ್ಯಾಹ್ನ 12.30ಕ್ಕೆ ಹೆಂಡತಿಯನ್ನು ಅಟ್ಟಾಡಿಸಿಕೊಂಡು ಹೊಡೆದು ಕೊಂದುಹಾಕಿದ್ದಾನೆ. ಮೆಹಬೂಬ್ ಹೊಡೆದ ಹೊಡೆತಕ್ಕೆ ಅಲಿಮಾಬೀ ಸ್ಥಳದಲ್ಲಿಯೇ ಅಸುನೀಗಿದ್ದಾಳೆ.
ಅಲಿಮಾಬೀ ಮತ್ತು ಮೆಹಬೂಬ್ 8 ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಬ್ಬರಿಗೆ ಏಳು ಮತ್ತು ಐದು ವರ್ಷದ ಇಬ್ಬರು ಮಕ್ಕಳಿದ್ದಾರೆ. ಅಲಿಮಾಬೀ ಕಾಸೀಂ ಎಂಬಾತನೊಂದಿಗೆ ಸಂಬಂಧ ಬೆಳೆಸಿದ್ದಳು. ಇದಕ್ಕೆ ಮೆಹಬೂಬ್ ಆಕ್ಷೇಪ ವ್ಯಕ್ತಪಡಿಸಿದ್ದರೂ ಅಲಿಮಾಬೀ ಕಿವಿಮೇಲೆ ಹಾಕಿಕೊಂಡಿರಲಿಲ್ಲ.
ಇದರಿಂದ ಇಬ್ಬರ ನಡುವೆ ಆಗಿಂದಾಗ್ಗೆ ಜಗಳಗಳು ನಡೆಯುತ್ತಿದ್ದವು. ಇಂದು ಪ್ರೇಮಿಗಳಿಬ್ಬರೂ ಒಟ್ಟಿಗೆ ಹೋಗುತ್ತಿದ್ದುದನ್ನು ನೋಡಿದ ಆಟೋ ಚಾಲಕ ಮೆಹಬೂಬ್ ಆಕೆಯನ್ನು ಬೆನ್ನತ್ತಿದ್ದಾನೆ. ಆಟೋ ಲಾರಿಗೆ ಡಿಕ್ಕಿ ಹೊಡೆದರೂ ಬಿಡದೆ ಬೆನ್ನತ್ತಿ ಮಚ್ಚನ್ನು ನೆತ್ತಿಯ ಮೇಲೆ ಹೊಡೆದು ಅಲಿಮಾಬೀಯ ಹತ್ಯೆಗೈದಿದ್ದಾನೆ.
ಪ್ರತ್ಯಕ್ಷ ದರ್ಶಿಗಳ ಪ್ರಕಾರ, ಮಹಿಳೆಯನ್ನು ಹತ್ಯೆ ಮಾಡಿದ ಮೆಹಬೂಬ್ ಪರಾರಿಯಾಗಲು ಕೂಡ ಪ್ರಯತ್ನಿಸದೆ ಸಹಜವಾಗಿ ನಡೆದುಹೋಗಿದ್ದಾನೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮೆಹಬೂಬ್ ವಿಚಾರಣೆ ಮಾಡುತ್ತಿದ್ದಾರೆ.












Click it and Unblock the Notifications