ಸಚಿನ್ ಡೆಬಿಟ್ ಕಾರ್ಡ್ ಹೊಂದಿದ್ದ ವಿದ್ಯಾರ್ಥಿ ಸೆರೆ

Sachin Debit Card Misuse
ಮುಂಬೈ, ಆ.10: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಡೆಬಿಟ್ ಕಾರ್ಡ್ ಹೊಂದಿದ್ದ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ಮಾಹಿಂನ ನಿವಾಸಿ 21 ವರ್ಷದ ಶೋಯೆಬ್ ದೂಧ್ ವಾಲಾ ಎಂಬ ವಿದ್ಯಾರ್ಥಿ ಎಟಿಎಂ ಕೇಂದ್ರ ಹೋದವನು ಎಷ್ಟು ಹೊತ್ತಾದರೂ ಹೊರಬಂದಿರಲಿಲ್ಲ. ಸಂಶಯಗೊಂಡು ವಿಚಾರಣೆ ನಡೆಸಿದಾಗ ಆತನ ಬಳಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಹೆಸರಿರುವ ಡೆಬಿಟ್ ಕಾರ್ಡ್ ಇರುವುದು ಪತ್ತೆಯಾಗಿದೆ.

ಸೆಂಟ್ರಲ್ ಸ್ಟಾಪ್ ಹತ್ತಿರ ನನಗೆ ಈ ಡೆಬಿಟ್ ಕಾರ್ಡ್ ಸಿಕ್ಕಿತು. ಇದು ಅಸಲಿಯೇ ನಕಲಿಯೇ ಎಂದು ಪರೀಕ್ಷಿಸಲು ಬಂದಿದ್ದೆ ಎಂದು ದೂಧ್ ವಾಲಾ ಹೇಳಿಕೆ ನೀಡಿದ್ದಾನೆ. ಆದರೆ, ಆತನ ಮಾತಿನಿಂದ ನಂಬಿಕೆ ಬರದ ಪೊಲೀಸರು ಸೂಕ್ಷ್ಮವಾಗಿ ಕಾರ್ಡ್ ನ ಪರೀಕ್ಷೆ ನಡೆಸಿದ್ದಾರೆ.

ಕೋಟಕ್ ಮಹೀಂದ್ರಾ ಬ್ಯಾಂಕ್ ಗೆ ಸೇರಿರುವ ಡೆಬಿಟ್ ಕಾರ್ಡ್ ಮೇಲೆ ಸಚಿನ್ ರಮೇಶ್ ತೆಂಡೂಲ್ಕರ್ ಎಂದು ಹೆಸರಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ. ಬ್ಯಾಂಕ್ ನಿಂದ ಮಾಹಿತಿ ಸಿಕ್ಕ ನಂತರ ಸಚಿನ್ ಅವರನ್ನು ಈ ಬಗ್ಗೆ ಪ್ರಶ್ನಿಸಲಾಗುವುದು. ಸಚಿನ್ ಕಾರ್ಡ್ ಕಳೆದುಕೊಂಡು ದೂರು ನೀಡಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ತನಿಖಾಧಿಕಾರಿ ವಿಕ್ರಮ್ ಪಾಟೀಲ್ ಹೇಳಿದ್ದಾರೆ.

ಡಮ್ಮಿ ಕಾರ್ಡ್ ಬಳಸಿ ಎಟಿಎಂ ಹಣ ತೆಗೆಯುವ ದಂಧೆ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು, ದೂಧ್ ವಾಲಾ ನಿಂದ ಸಚಿನ್ ಹೆಸರಿನ ಡೆಬಿಟ್ ಕಾರ್ಡ್ ಅಲ್ಲದೆ ನಾಲ್ಕು ಕ್ರೆಡಿಟ್ ಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ಕಾರ್ಡ್ ಜಾಲದ ಶಂಕೆ ಕೂಡಾ ಪೊಲೀಸರಿಗೆ ಸಿಕ್ಕಿದೆ. ತನಿಖೆ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+