ಶಿವಮೊಗ್ಗದಲ್ಲೂ ಗ್ಯಾಸ್ ಟ್ರಬಲ್, ಅಕ್ರಮ ಸಕ್ರಮ ಸುಖೀಭವ

ಒಂದೇ ಕುಟುಂಬ ಅನೇಕ ಕನೆಕ್ಷನ್: ಆದರೆ ಕೆಲವು ಗ್ಯಾಸ್ ಸಂಪರ್ಕದ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳೇ ಹೆಣಗಾಡುವಂತಾಗಿದೆ. ಒಂದೇ ಮನೆಯಲ್ಲಿರುವ ಗಂಡ, ಹೆಂಡತಿ, ಮಕ್ಕಳ ಹೆಸರಿನಲ್ಲಿ ಪ್ರತ್ಯೇಕ ಸಂಪರ್ಕ ಪಡೆಯಲಾಗಿದೆ. ಮೂರೂ ಸಂಪರ್ಕಕ್ಕೂ ಒಂದೇ ಆರ್ ಆರ್ ನಂಬರ್ ನೀಡಲಾಗಿರುವುದರಿಂದ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದರಲ್ಲಿ ಯಾವುದಾದರೂ ಒಂದನ್ನು ಇಟ್ಟುಕೊಂಡು ಉಳಿದ ಸಂಪರ್ಕ ಕಡಿತ ಮಾಡಿಸಿಕೊಳ್ಳಲು ಸೂಚಿಸಲಾಗುತ್ತಿದೆ.
ಆದರೆ ಈ ಸೂಚನೆಗೆ ಗ್ರಾಹಕರು ಒಪ್ಪುತ್ತಿಲ್ಲ. ಗಂಡ ಈ ಮನೆಯಲ್ಲಿಲ್ಲ. ಹೆಂಡತಿ ಇಲ್ಲಿಲ್ಲ. ಮಗ ಇಲ್ಲಿಲ್ಲ. ಬೇರೆ ಊರಲ್ಲಿ ಇದ್ದಾರೆ. ಅವರಿಗೆ ಗ್ಯಾಸ್ ಬೇಕು. ಇದರಿಂದಾಗಿ ಸಂಪರ್ಕ ಕಡಿತ ಮಾಡುವಂತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಅವರು ಇದ್ದ ಊರಿಗೆ ಗ್ಯಾಸ್ ಸಂಪರ್ಕ ವರ್ಗಾಯಿಸಿ ಕೊಳ್ಳುವಂತೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಬಾಡಿಗೆ ಮನೆ ಪ್ರಾಬ್ಲಂ: ಅಹಾರ ಇಲಾಖೆ ನಿಯಮದ ಪ್ರಕಾರ ಒಂದು ರೇಷನ್ ಕಾರ್ಡ್‌ಗೆ ಒಂದೇ ಗ್ಯಾಸ್ ಸಂಪರ್ಕ ಎಂದು ಹೇಳಲಾಗುತ್ತಿದ್ದರೂ, ಅದನ್ನು ಗ್ರಾಹಕರು ಕೇಳುತ್ತಿಲ್ಲ. ಬಾಡಿಗೆ ಮನೆಗಳ ಒಂದು ಮೀಟರ್ ನಂಬರ್‌ನ್ನು ಬಾಡಿಗೆಗಿರುವವರು ಹಾಕುತ್ತಿಲ್ಲ. ಅದನ್ನು ಇಲಾಖೆ ಮಾನ್ಯ ಮಾಡುತ್ತಿಲ್ಲ. ಆದರೆ ಸ್ವಂತ ಮನೆ ಇರುವವರೂ ಕೂಡ ಗಂಡ, ಹೆಂಡತಿ, ಮಕ್ಕಳ ಹೆಸರಿನಲ್ಲಿ ಗ್ಯಾಸ್ ಸಂಪರ್ಕ ಪಡೆದಿರುವುದನ್ನು ಕಡಿತಗೊಳಿಸುವ ನಿಯಮ ಜಾರಿಯಾಗಿಲ್ಲ.
ಗಂಡ ಒಂದು ಊರಲ್ಲಿ ಹೆಂಡತಿ ಇನ್ನೊಂದು ಊರಲ್ಲಿ ಇದ್ದು, ಸರ್ಕಾರಿ ಕೆಲಸ ಮಾಡುತ್ತಿದ್ದವರಿಗೆ ಆ ಪ್ರಕಾರದ ದಾಖಲೆ ಒದಗಿಸಿದರೆ ರಿಯಾಯ್ತಿ ನೀಡಲಾಗಿದೆ. ಇನ್ನು ಕೆಲವರು ಸ್ವಂತ ಊರಲ್ಲಿ ಗ್ಯಾಸ್ ಸಂಪರ್ಕ ಪಡೆದಿದ್ದವರೂ, ಬೇರೆ ಊರಿಗೆ ಹೋಗಿ ಇನ್ನೊಂದು ಸಂಪರ್ಕ ಪಡೆದಿದ್ದಾರೆ.
ಮೊದಲು ಪಡೆದ ಗ್ಯಾಸ್ ಸಂಪರ್ಕವನ್ನು ಪರಿಚಯಸ್ಥರಿಗೆ ಕೊಟ್ಟು ಹೆಚ್ಚುವರಿ ಸಿಲಿಂಡರ್ ಬಳಕೆ ಮಾಡುತ್ತಿದ್ದಾರೆ. ಇಂಥ ಜಟಿಲ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕೆಂಬ ಚಿಂತೆ ಅಧಿಕಾರಿಗಳನ್ನು ಕಾಡುತ್ತಿದೆ. ಒಟ್ಟಿನಲ್ಲಿ ಗ್ಯಾಸ್ ಸಿಲಿಂಡರ್ ಅಕ್ರಮವನ್ನು ಸಕ್ರಮ ಮಾಡಲು ಹೋಗಿ ಇಲಾಖೆಯ ನಿಯಮಾವಳಿಗಳನ್ನು ಬದಲಿಸುವ ಹಂತ ಸಮಸ್ಯೆ ಬಂದು ಮುಟ್ಟಿದೆ.












Click it and Unblock the Notifications