ಮೂವರು ಸೋದರಿಯರ ರೇಪ್ ಮಾಡಿದ ಸೌದಿ ಮಾಂತ್ರಿಕ

Saudi sorcerer rape 3 virgin sisters
ರಿಯಾದ್, ಆ.10: 'ಯಾವುದೇ ಕಾಯಿಲೆ ಗುಣಪಡಿಸುವ ಮಂತ್ರ ಶಕ್ತಿ ನನ್ನಲ್ಲಿದೆ. ಜತೆಗೆ, ನೀವು ಕಾಣುವ ಕೆಟ್ಟ ಕನಸುಗಳ ಫಲಶೃತಿ ಏನು ಎಂಬುದನ್ನು ಮುಂಚಿತವಾಗಿಯೇ ತಿಳಿಸಬಲ್ಲೆ' ಎಂದು ಹೇಳಿಕೊಂಡ ಮಾಂತ್ರಿಕನೊಬ್ಬ ಮೂವರು ಕನ್ಯೆಯರಿಗೆ ಮಂಕುಬೂದಿ ಎರಚಿ, ಅವರ ಮೇಲೆ ಸತತವಾಗಿ ಅತ್ಯಾಚಾರವೆಸಗಿದ್ದಾನೆ.

ಅದು ಹೇಗೋ ಮೂವರ ಪೈಕಿ ಒಬ್ಬ ಸೋದರಿಗೆ ಈ ಮಾಂತ್ರಿಕನ ಮೊಬೈಲ್ ನಂಬರ್ ಸಿಕ್ಕಿದೆ. ತಡವೇಕೆ ಎಂದು ಆ ಕನ್ಯೆ, 'ನಗೊಂದು ಕೆಟ್ಟ ಕನಸು ಬಿದ್ದಿದೆ. ಅದರರ್ಥ ಏನು ಎಂದು ಹೇಳಬಲ್ಲಿರಾ ಎಂದು ಮೊಬೈಲಿನಲ್ಲಿ ಮಾಂತ್ರಿಕನನ್ನು ಸಂಪರ್ಕಿಸಿದ್ದಾಳೆ.

30 ವರ್ಷ ಆಸುಪಾಸಿನ ಆ ಮಾಂತ್ರಿಕನೋ 'ತಡವೇಕೆ, ಬನ್ನೀ' ಎಂದು ತನ್ನ ಅಪಾರ್ಟ್ ಮೆಂಟಿಗೆ ಬರುವಂತೆ ಆಹ್ವಾನ ನೀಡಿದ್ದಾನೆ. ಕನಸಿನ ಬೆನ್ನತ್ತಿ ಬಂದ ಯುವತಿಗೆ ತುಂಬುತೋಳಿನ ಸ್ವಾಗತ ಕೋರಿದ ಮಾಂತ್ರಿಕ ಅವಳ ಮೇಲೆ ಮಂಕು ಬೂದಿ ಪ್ರಯೋಗಿಸಿದ್ದಾನೆ. ಅವಳೋ, ಇವನ ಮಾಂತ್ರಿಕ ವಿದ್ಯೆಗೆ ಸಂಪೂರ್ಣವಾಗಿ ಶರಣಾಗಿದ್ದಾಳೆ.

ಮುಂದ!? :
ನೋಡು, ನಿನಗೆ ಬಿದ್ದಿರುವ ಕನಸು ಭೀಕರವಾಗಿದೆ. ಅದರ ಪರಿಣಾಮವನ್ನು ನಿಷ್ಕ್ರಿಯಗೊಳಿಸಬೇಕೆಂದರೆ ನನ್ನೊಂದಿಗೆ ಮಲಗು ಎಂದು ಪುಸಲಾಯಿಸಿದ್ದಾನೆ. ಅವಳೋ, ಒಂದಲ್ಲ ಎರಡಲ್ಲ ಅನೇಕ ಬಾರಿ ಆ ಖದೀಮನೊಂದಿಗೆ ಮಲಗಿ ಸಹಕರಿಸಿದ್ದಾಳೆ ಎಂದು ಷಾರ್ಕ್ ದಿನಪತ್ರಿಕೆ ಮಂಗಳವಾರ ವರದಿ ಮಾಡಿದೆ.

ಇಷ್ಟಕ್ಕೇ ಸುಮ್ಮನಾಗದ ಮಹಾ ಮಾಂತ್ರಿಕ ನಿನ್ನ ಇಬ್ಬರು ಸೋದರಿಯರನ್ನೂ ಜತೆಗೆ ಕರೆದುಕೊಂಡು ಬಾ ಎಂದಿದ್ದಾನೆ. ಅವಳೋ, ಓಕೆ ಎಂದಿದ್ದಾಳೆ. ಪರಮ ಪಾಪಿ ಆ ಇಬ್ಬರು ಸೋದರಿಯರ ಜತೆಯೂ ಮಲಗಿ ಅವರ ಕನ್ಯತ್ವವನ್ನು ಸ್ವಾಹಾ ಮಾಡಿದ್ದಾನೆ.

ಇಷ್ಟಕ್ಕೂ ಸುಮ್ಮನಾಗದ ಲಜ್ಜಗೇಡಿ ಮಾಂತ್ರಿಕ ನನ್ನ ಎದುರಿಗೇ ನೀವು ನೀವೇ ಸಲಿಂಗಕಾಮದಲ್ಲಿ ತೊಡಗಿ ಎಂದೂ ದುಂಬಾಲು ಬಿದ್ದಿದ್ದಾನೆ. ಕೊನೆಗೂ ಸೋದರಿಯರ ಪೈಕಿ ಒಬ್ಬಳಿಗೆ ಜ್ಞಾನೋದಯವಾಗಿದೆ. ಕೊಲ್ಲಿ ಸಾಮ್ರಾಜ್ಯದಲ್ಲಿ ಅತಿ ಕಠಿಣವಾದ ಕಾನೂನು ಜಾರಿ ಇಲಾಖೆ ಎನಿಸಿರುವ ಮಾಟ ನಿಯಂತ್ರಣ ಆಯೋಗಕ್ಕೆ ಅವಲತ್ತುಕೊಂಡಿದ್ದಾಳೆ.

ತಕ್ಷಣ ಎಚ್ಚೆತ್ತ ಆಯೋಗ ಮಹಾ ಮಾಂತ್ರಿಕನಿಗೆ ಸರಿಯಾಗಿ ಬಲೆ ಬೀಸಿದೆ. 'ಅವನನ್ನು ಮತ್ತೊಮ್ಮೆ ಸಂಧಿಸು. ನಾವು ಬಂದು ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡೀತೀವಿ' ಎಂದು ಜ್ಞಾನೋದಯವಾಗಿದ್ದ ಯುವತಿಗೆ ತಿಳಿಹೇಳಿದೆ. ಸರಿ ಅದರಂತೆ 'ಕಾರಿನಲ್ಲಿ ಸಂಧಿಸೋಣ ಬಾ' ಎಂದು ಯುವತಿ ಮಾಂತ್ರಿಕನಿಗೆ ಆಹ್ವಾನ ನೀಡಿದ್ದಾಳೆ. ಇವನೋ, ಸ್ವತಃ ಮಂಕುಬೂದಿ ಪ್ರಯೋಗಕ್ಕೆ ಒಳಗಾದವನಂತೆ ಸೀದಾ ಕಾರಿನೊಳಕ್ಕೆ ನುಗ್ಗಿಬಂದ ಮಾಂತ್ರಿಕನನ್ನು ಆಯೋಗದ ಸೂಚನೆಯ ಮೇರೆಗೆ ಪೊಲೀಸರು ಬಂಧಿಸಿ, ಪಾಪ ಸೋದರಿಯರಿಗೆ ಮುಕ್ತಿ ದೊರಕಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+