ಗೂಂಡಾಗಳಿಂದ ನನ್ನ ಅತ್ಯಾಚಾರಕ್ಕೆ ಸ್ಕೆಚ್: ಟಿವಿ ನಟಿ

 Rape threat- Model-cum-Actor allege
ದೆಹಲಿ, ಆಗಸ್ಟ್ 9: ಇದು ಸಿನಿಮಾ ಕಥೆಯನ್ನು ಹೋಲುವ ನಿಜ ಜೀವನದ ಕತೆ. ನನ್ನ ಗಂಡನ ಗೆಳತಿಯೊಬ್ಬಳು ನನಗೆ ಬೆದರಿಕೆಯೊಡ್ಡುತ್ತಿದ್ದಾಳೆ. ನನ್ನ ಅಶ್ಲೀಲ ವೀಡಿಯೊ ಬಹಿರಂಗ ಪಡಿಸುವುದಾಗಿ ಧಮಕಿ ಹಾಕಿದ್ದಾಳೆ ಎಂದು ದೆಹಲಿಯ ಮಾಡೆಲ್ ಕಮ್ ಟಿವಿ ನಟಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ. (ಇದನ್ನೂ ಓದಿ)

ನನ್ನ ಗಂಡ (ಆಫ್ಘನ್ ಪ್ರಜೆ) ಅರ್ಜುನ್ ಖಾನ್ ಬಾರ್ ಗರ್ಲ್ ಆಗಿರುವ ಶೋಭಾ ಎಂಬವಳ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಮಾಡೆಲ್ ಸಲೀನಾ ವಲಿ ಖಾನ್ ಬದರ್ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಹಲವು ಟಿವಿ ಸೀರಿಯಲ್ ಗಳಲ್ಲಿ ನಟಿಸಿರುವ ಸಲೀನಾ, ಮಾಡೆಲ್ ಅರ್ಜುನನ್ನು ಮದುವೆಯಾಗುವದಕ್ಕೂ ಮುನ್ನವೇ ಅವನಿಗೆ ಶೋಭಾ ಜತೆ ಸಂಬಂಧವಿತ್ತು. ಆದರೆ ಅದನ್ನು ನನಗೆ ಇಳಿಸದೆ ಮುಚ್ಚಿಟ್ಟಿದ್ದ. ವಿಷಯ ತಿಳಿದ ಮೇಲೆ ಅವಳ ಸಂಬಂಧ ಕಡಿದುಕೋ ಎಂದು ಎಚ್ಚರಿಕೆ ನೀಡಿದ್ದೆ. ಆದರೆ ಅವನು ಬಗ್ಗಲಿಲ್ಲ. ಕೊನೆಗೆ ಮಾಧ್ಯಮ ಎದುರು ಎಲ್ಲವನ್ನೂ ಬಹಿರಂಗಪಡಿಸಿದೆ. ಆ ಸಂದರ್ಭದಲ್ಲಿ ಮೀಡಿಯಾ ಕ್ಯಾಮರಾ ಎದುರಿಗೇ ಅವನ ತಲೆಗೆ ಸರಿಯಾಗಿ ಹೊಡೆದಿದ್ದೆ ಎಂದು ಒಂದೇ ಉಸಿರಿನಲ್ಲಿ ಸಲೀನಾ ತನ್ನ ಕಥೆಯ್ನು ಪೊಲೀಸರಿಗೆ ಹೇಳಿಕೊಂಡಿದ್ದಾಳೆ.

ಬ್ರೇಕ್ ಕೆ ಬಾದ್ ಅಲ್ಲೇನಾಯಿತು ಎಂದರೆ ಸಲೀನಾ ಮೇಲೆ ಶೋಭಾ ಸೇಡು ತೀರಿಸಿಕೊಳ್ಳಲು ನಿಶ್ಚಯಿಸಿದ್ದಾಳಂತೆ. ಅದರಂತೆ ನಾನಾ ಮೊಬೈಲ್ ಗಳಿಂದ ಸಲೀನಾಗೆ ಕರೆ ಮಾಡಿ 'ಬಾಡಿಗೆ ಜನರನ್ನು ಬಿಟ್ಟು ಅವಳ ಮೇಲೆ ರೇಪ್ ಮಾಡಿಸುವುದಾಗಿ' ಬೆದರಿಕೆ ಹಾಕುತ್ತಿದ್ದಾಳಂತೆ.

ಈ ಮಧ್ಯೆ, ಪತಿರಾಯ ಅಫ್ಘಾನಿಸ್ತಾನಕ್ಕೆ ಸದ್ದಿಲ್ಲದೆ ಪರಾರಿಯಾಗಿದ್ದಾನೆ. ಹೋಗುವಾಗ ಅವನು ನನ್ನ ಫೋಟೋಗಳು, ಎಟಿಎಂ ಕಾರ್ಡುಗಳು ಮತ್ತಿತರ ಪ್ರಮುಖ ಕಾರ್ಡುಗಳನ್ನು ತೆಗೆದುಕೊಂಡು ಹೋಗಿದ್ದಾನೆ. ಅದನ್ನೆಲ್ಲ ದುರ್ಬಳಕೆ ಮಾಡಿಕೊಳ್ಳುವುದು ಗ್ಯಾರಂಟಿ. ಹೇಗಾದರೂ ಮಾಡಿ ನನ್ನ್ನು ಕಾಪಾಡಿ ಎಂದು ಸಲೀನಾ ಪೊಲೀಸರಿಗೆ ಅಲವತ್ತುಕೊಂಡಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+