ಬಿಐಎಎಲ್ ಗೆ ಉತ್ತಮ ಬ್ಯಾಗೇಜ್ ನಿರ್ವಹಣಾ ಪ್ರಶಸ್ತಿ

BIAL gets Baggage Improvement Programme certificate
ಬೆಂಗಳೂರು, ಆ. 9 : ಸಾಮಾನು ಸರಂಜಾಮುಗಳು ಕಳೆಯದಂತೆ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಗೇಜ್ ಇಂಪ್ರೂವ್ಮೆಂಟ್ ಪ್ರೊಗ್ರಾಂ ಅಡಿಯಲ್ಲಿ ಉತ್ತಮ ನಿರ್ವಹಣಾ ಸರ್ಟಿಫಿಕೇಟ್ ನೀಡಲಾಗಿದೆ.

ಇಂಥ ಪ್ರಮಾಣಪತ್ರ ಪಡೆಯುತ್ತಿರುವ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣ ಮೊದಲನೇಯದು. ಅಂತಾರಾಷ್ಟ್ರೀಯವಾಗಿ ಕೂಡ ಕೆಲವೇ ನಿಲ್ದಾಣಗಳಿಗೆ ಇಂಥ ಸರ್ಟಿಫಿಕೇಟ್ ನೀಡಲಾಗಿದೆ.

"ಪ್ರವಾಸಿಗರಿಗೆ ನಿರಂತರವಾಗಿ ಅತ್ಯುತ್ತಮ ಸೇವೆ ಸಲ್ಲಿಸಬೇಕೆಂಬ ನಮ್ಮ ಧ್ಯೇಯಕ್ಕೆ ಸಿಕ್ಕ ಗೆಲುವಾಗಿದೆ" ಎಂದು ಬಿಐಎಎಲ್ ನ ಕಾರ್ಯನಿರ್ವಾಹಕ ನಿರ್ದೇಶಕ ಜಿವಿ ಸಂಜಯ್ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿಯನ್ನು ಇಂಡಿಯನ್ ಏರ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ ನೀಡುತ್ತಿದೆ.

ಬ್ಯಾಗೇಜುಗಳ ಯದ್ವಾತದ್ವಾ ನಿರ್ವಹಣೆಯಿಂದಾಗಿ ಪ್ರತಿವರ್ಷ ವಿಮಾನೋದ್ಯಮಕ್ಕೆ 3.3 ಬಿಲಿಯನ್ ಡಾಲರ್ ನಷ್ಟವಾಗುತ್ತಿದೆ. ಪ್ರಯಾಣ ಸುಖಕರವಾಗಬೇಕಿದ್ದರೆ ಸಾಮಾನುಗಳ ನಿರ್ವಹಣೆ ಅತ್ಯುತ್ತಮವಾಗಿರಬೇಕು ಎಂಬುದರಲ್ಲಿ ಎರಡು ಮಾತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+