ಯುವತಿಯ ಜತೆ ಪರಾರಿ: ಯುವಕನಿಗೆ 10 ಸಾವಿರ ರು. ದಂಡ

ಇಲ್ಲಿಂದ 20 ಕಿ.ಮೀ. ದೂರದಲ್ಲಿರುವ ಬುಧುಪುರ ಗ್ರಾಮದಲ್ಲಿ ಪಂಚಾಯ್ತಿ ಸೇರಿದ್ದ ಹಿರಿಯರು ಈ ಫರ್ಮಾನು ಹೊರಡಿಸಿದ್ದಾರೆ. 18 ವರ್ಷದ ಯುವತಿಯೊಂದಿಗೆ ಆರೋಪಿ ಯುವಕ ಆಗಸ್ಟ್ 1ರಂದು ಪರಾರಿಯಾಗಿದ್ದ. ಯುವತಿಯ ಕುಟುಂಬದವರು ಈ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಯುವತಿಯ ಪೋಷಕರು ಪಂಚಾಯಿತಿ ಕಟ್ಟೆ ಹತ್ತಿದರ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ ಎಂದು ಪಂಚಾಯಿತಿ ಸದಸ್ಯರಾದ ಶರಾಫತ್ ಮತ್ತು ಫರ್ಮಾನ್ ತಿಳಿಸಿದ್ದಾರೆ.












Click it and Unblock the Notifications