ನಿದ್ದೆ ಮಂಪರಿನಲ್ಲಿ ಮಿ.ಬೀನ್ ಮಾಡಿಕೊಂಡ ಎಡವಟ್ಟು

Mr Bean crashes sports car
ಲಂಡನ್, ಆ. 6: ತನ್ನ ಕಾರ್ಯಕ್ರಮದಲ್ಲಿ ಏನಾದಾರೂ ಎಡವಟ್ಟು ಮಾಡಿಕೊಳ್ಳುವ ಮಿಸ್ಟರ್ ಬೀನ್ ಖ್ಯಾತಿಯ ರೋವ್ಯಾನ್ ಅಟ್ಕಿನ್ ಸನ್ ನಿಜಜೀವನದಲ್ಲೂ ಎಡವಟ್ಟು ಮಾಡಿಕೊಂಡಿದ್ದಾರೆ. ನಿದ್ದೆಯ ಮಂಪರಿನಲ್ಲಿ ಮ್ಯಾಕ್ ಲಾರೆನ್ ಎಫ್ 1 ಕಾರನ್ನು ಚಲಾಯಿಸಿ ಮರಕ್ಕೆ ಡಿಕ್ಕಿ ಹೊಡೆದು ಭುಜಕ್ಕೆ ಗಾಯ ಮಾಡಿಕೊಂಡಿದ್ದಾರೆ.

ಅದೃಷ್ಟವಶಾತ್ ಮಿ.ಬೀನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ರೀತಿ ಎಡವಟ್ಟು ಮಾಡಿಕೊಳ್ಳುವುದು ಅವರಿಗೆ ಹೊಸದೇನಲ್ಲ, ತನ್ನ ನೆಚ್ಚಿನ ಕಾರ್ ಚಲಾಯಿಸಿ ಇದು ಎರಡನೇ ಬಾರಿ ಅವರು ಅಪಘಾತಕ್ಕೆ ಈಡಾಗುತ್ತಿರುವುದು.

ತನ್ನ ವಿಶಿಷ್ಟ ಆಂಗಿಕ ಅಭಿನಯದಿಂದ ಹಾಸ್ಯರಸ ಉಕ್ಕಿಸಿ ಜನರನ್ನು ಅದರಲ್ಲೂ ಹೆಚ್ಚಾಗಿ ಮಕ್ಕಳನ್ನು ನಗೆಯಲ್ಲಿ ತೇಲಾಡಿಸುವ ಮಿ. ಬೀನ್ ನಡೆಸುವ ಕೊಡುವ ಕಾರ್ಯಕ್ರಮ ಯುಕೆ ಭಾಗದಲ್ಲಿ ಮಾತ್ರ ಅಲ್ಲ ಭಾರತದಲ್ಲೂ ಬಹಳ ಜನಪ್ರಿಯ. ತನ್ನ ಕಾಯಕ್ರಮದಲ್ಲಿ ಪ್ರಾಪಂಚಿಕ ಜ್ಞಾನವಿಲ್ಲದಂತೆ ನಡೆಸುವ ಇವರು ಯುರೋಪ್ ಭಾಗದಲ್ಲಿ ಬಹಳ ಜನಪ್ರಿಯರು.

ಅವರ "Hair by Mr. Bean of London", "The trouble with Mr. Bean", "Mr. Bean's Holiday" ಮುಂತಾದ ಕಾರ್ಯಕ್ರಮಗಳು ಜನರನ್ನು ಸೆಳೆದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+