ರಾಜಕೀಯ ಕೆಸರೆರಚಾಟ ಬೇಸರವಾಗಿದ್ದರೆ ಕಗ್ಗೋಗ್ಲುಗೆ ಬನ್ನಿ

ಸುರಿಯುವ ಮಳೆಯಲ್ಲಿ... ಕೊರೆಯುವ ಚಳಿಯಲ್ಲಿ... ನೀರು ತುಂಬಿದ ಕೆಸರು ಗದ್ದೆಯಲ್ಲಿ ನಡೆಯುವ ವಿವಿಧ ಕ್ರೀಡಾಕೂಟಗಳು... ಯಾವುದೇ ಗ್ಯಾಲರಿಗಳಿಲ್ಲದೆ ಗದ್ದೆ ಏರಿಯಲ್ಲೇ ನಿಂತು ವೀಕ್ಷಿಸುವ ಕ್ರೀಡಾಪ್ರೇಮಿಗಳು... ಇದು ಕಗ್ಗೋಡ್ಲುನಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟದ ಸ್ಪೆಷಲ್.
ನೆಹರು ಯುವ ಕೇಂದ್ರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕೊಡಗು ಯೂತ್ ಹಾಸ್ಟೆಲ್ ಅಸೋಷಿಯೇಶನ್ ಆಫ್ ಇಂಡಿಯಾದ ಮಡಿಕೇರಿ ಘಟಕ ಮತ್ತು ಜಿಲ್ಲಾ ಹಾಗೂ ತಾಲೂಕು ಯುವ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಕಗ್ಗೋಡ್ಲುವಿನ ಸಿ.ಬಿ.ದೇವಯ್ಯ ಅವರ ವಿಶಾಲ ಗದ್ದೆಯಲ್ಲಿ ನಾಟಿ ಓಟ ಹಾಗೂ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ.
ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಓಟ, ಹಗ್ಗಜಗ್ಗಾಟ ಇನ್ನಿತರ ಕ್ರೀಡಾಸ್ಪರ್ಧೆ ನಡೆಯಲಿದ್ದು, ಈ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗೆ 9481771983, 9845487386, 9845571290 ಸಂಪರ್ಕಿಸಬಹುದು.












Click it and Unblock the Notifications