ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಬೆಂಗಳೂರು,
ಆ.2: ವಿವಾಹಿತ ಮಹಿಳೆ (38) ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಚಂದ್ರಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಮೂವರು ದುಷ್ಕರ್ಮಿಗಳು ಚಿನ್ನಾಭರಣವನ್ನೂ ದೋಚಿ ಪರಾರಿಯಾಗಿದ್ದಾರೆ. id="toptextpromo">ಗಾರ್ಮೆಂಟ್
ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈಕೆ ಭಾನುವಾರ ರಜೆ ಇದ್ದ ಕಾರಣ ಊರಿಗೆ ಹೋಗಿದ್ದರು. ಸುಮಾರು ರಾತ್ರಿ 11.45ರ ಹೊತ್ತಲ್ಲಿ ನಾಯಂಡಹಳ್ಳಿಯಲ್ಲಿ ಬಸ್ ಇಳಿದು ಮನೆಗೆ ಹೋಗುತ್ತಿರಬೇಕಾದರೆ, ಈಕೆಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಸ್ವಲ್ಪ ದೂರದಲ್ಲಿದ್ದ ಹಳೆ ಕಟ್ಟಡವೊಂದಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕಾಮದಾಹವನ್ನು
ತೀರಿಸಿಕೊಂಡ ದುಷ್ಕರ್ಮಿಗಳು ಆಕೆಯ ಬಳಿ ಇದ್ದ ರು.4,500 ನಗದು ಹಾಗೂ 30 ಗ್ರಾಂ ಚಿನ್ನವನ್ನೂ ಕಸಿದುಕೊಂಡಿದ್ದಾರೆ. ನಿಸ್ಸಹಾಯಕಳಾದ ಆಕೆ ಎಷ್ಟೇ ಗೋಗರೆದರೂ ಬಿಡದೆ ಆಕೆಯ ಕತ್ತಿನಲ್ಲಿದ್ದ ತಾಳಿಯನ್ನೂ ದುಷ್ಕರ್ಮಿಗಳು ದೋಚಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು. ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications