ಯುವತಿಯರ ಜತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ತಿಹಾರ್ ಪೊಲೀಸ್
ನವದೆಹಲಿ,
ಆಗಸ್ಟ್ 1: ಇಲ್ಲಿನ ಅತ್ಯಂತ ಭದ್ರತೆಯ ತಿಹಾರ್ ಜೈಲಿನಲ್ಲಿ ಕರಾಳ ಕಾಮ ದಂಧೆಯಲ್ಲಿ ತೊಡಗಿದ್ದ ಸಹಾಯಕ ಜೈಲು ಸೂಪರಿಂಟೆಂಡೆಂಟ್ ಆರ್. ಮೌರ್ಯ ಮತ್ತೊ ಒಬ್ಬ ಪೇದೆಯನ್ನು ಅಮಾನತುಗೊಳಿಸಲಾಗಿದೆ. id="toptextpromo">ಜೈಲು
ಆವರಣದಲ್ಲಿರುವ ತಮ್ಮ ಪೊಲೀಸ್ ವಸತಿಗೃಹದಲ್ಲಿ ಮೌರ್ಯ ಮಹಾಶಯ ಹೆಂಡತಿ ಮತ್ತು ಮಕ್ಕಳನ್ನು ಊರಿಗೆ (ಬಿಹಾರ) ಕಳಿಸಿ, ಬೆಲೆವೆಣ್ಣುಗಳ ಜತೆ ದಂಧೆಯಲ್ಲಿ ತೊಡಗಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ ಎಂದು ಜೈಲಿನ ಮಹಾನಿರ್ದೇಶಕ ನೀರಜ್ ಕುಮಾರ್ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ಇದೊಂದು
ಗಂಭೀರ ಪ್ರಕರಣವಾಗಿದ್ದು, ಇಬ್ಬರು ಕಾಲ್ ಗರ್ಲ್ಸ್ ಸಹ ಸಿಕ್ಕಿಬಿದ್ದಿದ್ದಾರೆ. ತನಿಖೆಗೆ ಅದೇಶಿಸಲಾಗಿದೆ. ಆತಂಕದ ವಿಚಾರವೆಂದರೆ ಈ ರೀತಿಯ ವೇಶ್ಯಾವಾಟಿಕೆ ತಿಹಾರ್ ಜೈಲಿನಲ್ಲಿ ಕಂಡುಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ ಇನ್ನೂ ಉನ್ನತಾಧಿಕಾರಿಗಳು ಭಾಗಿಯಾಗಿದ್ದು ಪತ್ತೆಯಾಗಿತ್ತು' ಎಂದು ಅವರು ಹೇಳಿದ್ದಾರೆ.











Click it and Unblock the Notifications