ಹಾಫ್ ಇಂಡಿಯನ್ ಖ್ಯಾತಿಯ ನಟಿ ಕತ್ರಿನಾಗೆ ಬಿಜೆಪಿ ಹೂವೀಳ್ಯ
ಮುಂಬೈ,
ಜುಲೈ 27: ಯಸ್. ರಾಹುಲ್ ಗಾಂಧಿ 'ಆಫ್ ಇಂಡಿಯನ್- ಆಫ್ ಇಟಾಲಿಯನ್' ಎಂದು ತಿಳಿದೋ, ತಿಳಿಯದೆಯೋ ಹೇಳಿಕೆ ನೀಡಿ ಬಿರುಗಾಳಿ ಎಬ್ಬಿಸಿದ ಬಾಲಿವುಡ್ ನಟಿ ಕತ್ರೀನಾ ಕೈಫ್ ಗೆ ಬಿಜೆಪಿ ಅಗ್ರ ಮಣೆ ಹಾಕಿದೆ. ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮತ್ತು ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕತ್ರೀನಾ ಅವರನ್ನು ಪಕ್ಷದ ಪರ ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಲು ಪಕ್ಷ ನಿರ್ಧರಿಸಿದೆ. id="toptextpromo">ಕಾಂಗ್ರೆಸ್
ಪಕ್ಷದ ಯುವರಾಜನ ಕುರಿತಾದ ಕತ್ರೀನಾ ಹೇಳಿಕೆಯಲ್ಲಿ ಯಾವುದೇ ಸುಳ್ಳು ಇಲ್ಲ. ಕೋಟ್ಯಂತರ ಜನರ ಅಭಿಪ್ರಾಯವನ್ನು ಕೈಫ್ ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕಾಗಿ ನಾವು ಅಭಿನಂದಿಸುತ್ತೇವೆ. ಬೇರೆ ಯಾರೂ ಮಾಡದ ಕೆಲಸವನ್ನು ಆಕೆ ಮಾಡಿದ್ದಾಳೆ. ಹೀಗಾಗಿ ಬಾಲಿವುಡ್ ನಟಿಯನ್ನು ಪಕ್ಷದ ಪರ ಪ್ರಚಾರಕ್ಕೆ ಆಹ್ವಾನಿಸಲು ಎಲ್ಲಾ ಪ್ರಯತ್ನ ಮಾಡುವುದಾಗಿ ಮುಂಬೈ ನಗರ ಬಿಜೆಪಿ ಅಧ್ಯಕ್ಷ ರಾಜ್. ಕೆ. ಪುರೋಹಿತ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆಕೆ
ತನ್ನ ಈ ಹೇಳಿಕೆ ಕುರಿತು ಕ್ಷಮೆ ಕೇಳಿದ್ದಾಳಾದರೂ ಅದು ಹೇಳಿಕೆಯನ್ನು ಹಿಂಪಡೆದಂತೆ ಅಲ್ಲ. ಯಾರಿಗಾದರೂ ತನ್ನ ಹೇಳಿಕೆಯಿಂದ ಬೇಸರವಾಗಿದ್ದರೆ ಅದಕ್ಕೆ ಕ್ಷಮೆ ಕೋರುತ್ತೇನೆ ಎಂದಿದ್ದಾಳೆ ಅಷ್ಟೇ ಎಂದು ಪುರೋಹಿತ್ ಹೇಳಿದ್ದಾರೆ.











Click it and Unblock the Notifications