ಅಬ್ಬಬ್ಬಾ, ಅದೆಂಥ ಕಲ್ಪನಾಶಕ್ತಿ ಈ ಬಾಲಕಿಗೆ!

ಜ್ಯೋತಿಷಿಗಳನ್ನು ಪಕ್ಕಕ್ಕಿಟ್ಟು, ಪ್ರಶ್ನೆಗಳಲ್ಲಿ ಎಂತಹ ಪ್ರಶ್ನೆಗಳಿರುತ್ತಾವೆಂದು ತಿಳಿಯಬೇಕಿದ್ದರೆ ಈ ಬಾಲಕಿಯನ್ನು ಭೇಟಿ ಮಾಡಿ. ಆ ಹುಡುಗಿಯನ್ನು ಭೇಟಿಯಾಗಬೇಕಿದ್ದರೆ 15 ವರ್ಷದ ದೆಹಲಿಯ ಬಾಲಕಿ ಬರೆದಿರುವ 'But Era Said' ಎಂಬ ಪುಸ್ತಕವನ್ನು ವಿದ್ಯಾರ್ಥಿಗಳೆಲ್ಲ ಓದಬೇಕು. ಅದಿನ್ನೂ ಪ್ರಕಟಣೆಯಾಗುವ ಹಂತದಲ್ಲಿದೆ ಕಾಯಿರಿ.
ಪಠ್ಯಪುಸ್ತಕಗಳನ್ನು ಓದುತ್ತಾ, ಓರಗೆಯ ಸ್ನೇಹಿತರೊಂದಿಗೆ ಆಟವಾಡುತ್ತ ಕಾಲ ಕಳೆಯಬೇಕಿದ್ದ, ಮುಂಬೈ ಮೂಲದ ದೆಹಲಿಯಲ್ಲಿ ಓದುತ್ತಿರುವ ಶ್ರೇಯಾ ಮಾಥುರ್ ಈ ಪುಸ್ತಕದ ಕರ್ತೃ. ಎಸ್ಸೆಸ್ಸೆಲ್ಸಿ ಬೋರ್ಡ್ ಪರೀಕ್ಷೆ ಓದುವಾಗಲೆಲ್ಲ ಬೇಜಾರಾದ ಬರೆದಿಟ್ಟಿದ್ದ ಕಥೆಗಳನ್ನು ಹಾರ್ಪರ್ ಕಾಲಿನ್ಸ್ ಪ್ರಕಾಶನ ಪ್ರಕಟಿಸುತ್ತಿದೆ.
ನವಿರಾದ ಹಾಸ್ಯದ ಮುಖಾಂತರ ಪ್ರಶ್ನೆಪತ್ರಿಕೆಯನ್ನು ಪ್ರೆಡಿಕ್ಟ್ ಮಾಡುವ ವಿದ್ಯಾರ್ಥಿಯ ಕಥೆಯನ್ನು ಹೇಳುತ್ತಾ ಹೋಗುತ್ತಾಳೆ ಶ್ರೇಯಾ. ಕಥೆ ನಾನಾ ರೂಪಗಳನ್ನು, ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ. ಮುಂದೇನಾಗುತ್ತದೆ... ಕಾದು ನೋಡಿ.
ಶ್ರೇಯಾ ಸುಮ್ಮನೆ ಬರೆದಿಟ್ಟ ಲೇಖನಗಳನ್ನು ಓದಿದ ಸ್ನೇಹಿತರೇ ಅವಳನ್ನು ಪುಸ್ತಕ ರೂಪದಲ್ಲಿ ತರಲು ಒತ್ತಾಯ ಮಾಡಿದ್ದಾರೆ. ಇದರಿಂದ ಉತ್ತೇಜಿತಳಾದ ಶ್ರೇಯಾ, ತಾನೇ ಪ್ರಕಾಶಕರನ್ನು ಹುಡುಕಿ ಹಸ್ತಪ್ರತಿಗಳನ್ನು ನೀಡಿದ್ದಾಳೆ. ಆಕೆಯಲ್ಲಿರುವ ಶ್ರದ್ಧೆ, ಜಾಣ್ಮೆ, ಬರೆಯುವ ತಾಕತ್ತನ್ನು ಗುರುತಿಸಿದ ಪ್ರಕಾಶಕರು ಪುಸ್ತಕ ರೂಪದಲ್ಲಿ ತರುತ್ತಿದ್ದಾರೆ. ಶ್ರೇಯಾಗೆ ಅಭಿನಂದನೆಗಳು.












Click it and Unblock the Notifications