ಮಹಿಳೆಯರಿಗೆ ಅಶ್ಲೀಲ ಎಸ್ಎಂಎಸ್ ಕಳಿಸಿದರೆ ಜೋಕೆ!

26 ವರ್ಷ ಸೌವಿಕ್, 2009ರಲ್ಲಿ ಆರ್ ಜೆ ಆಗಿ ಉದ್ಯೋಗಕ್ಕೆ ಸೇರಿದ್ದಾನೆ. 38 ವರ್ಷದ ಕಂಪನಿ ಮುಖ್ಯಸ್ಥೆ ಕಂಡರೆ ಸೌವಿಕ್ ಗೆ ಏನೋ ಮೋಹ, ಏನೋ ದಾಹ, ಸಹದ್ಯೋಗಿ ಎಂದು ತನ್ನ ಖಾಸಗಿ ನಂಬರ್ ಸೌವಿಕ್ ಗೆ ನೀಡಿದ್ದೆ ಆಕೆ ಮಾಡಿದ ಮೊದಲ ತಪ್ಪು. ಮೊಬೈಲ್ ಫೋನ್ ಮುಟ್ಟಲು ಅಸಹ್ಯ ಆಗುವಷ್ಟರ ಮಟ್ಟಿಗೆ ನಾನ್ ವೆಜ್ ಮೆಸೇಜ್ ಗಳನ್ನು ಸೌವಿಕ್ ಆಕೆಗೆ ಕಳಿಸಲು ಆರಂಭಿಸಿದ. ಒಂದೆರಡು ಬಾರಿ ಸೌವಿಕ್ ಗೆ ಆಕೆ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿರಲಿಲ್ಲ.
ದಿನನಿತ್ಯ 50ಕ್ಕೂ ಅಧಿಕ ಅಶ್ಲೀಲ ಸಂದೇಶಗಳ ದಾಳಿಗೆ ತುತ್ತಾದ ಆಕೆ, ಅಂತೂ ವರ್ಷ ಕಾಲ ಆತನ ಕಾಟ ಸಹಿಸಿಕೊಂಡು ಕೊನೆಗೆ ಸಾಕೇತ್ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾಳೆ. ಮೊದಲಿಗೆ ಸೌವಿಕ್ ನನ್ನು ಕರೆದು ಪೊಲೀಸರು ಬುದ್ಧಿವಾದ ಹೇಳಿದ್ದಾರೆ.
ಆದರೆ, ಆಫೀಸಿಗೆ ಹೋದ ಸೌವಿಕ್ ಮತ್ತೆ ತನ್ನ ಚಾಳಿ ಮುಂದುವರೆಸಿ ಆ ದಿನವೇ 200 ಮೆಸೇಜ್ ಗಳ ಮೂಲಕ ದಾಳಿ ಮಾಡಿದ್ದಾನೆ. ಕೊನೆಗೆ ಸೌವಿಕ್ ವಿರುದ್ಧ ಐಪಿಸಿ ಸೆಕ್ಷನ್ 509 ಅನ್ವಯ ಕೇಸು ದಾಖಲಿಸಲಾಯಿತು. ಆದರೆ, ಸ್ವಲ್ಪ ಸಮಯದ ನಂತರ ಜಾಮೀನು ಪಡೆದ ಸೌವಿಕ್ ಹೊರಬಿದ್ದಿದ್ದಾನೆ.
ವೃತ್ತಿಪರ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದರೆ ಕಠಿಣ ಶಿಕ್ಷೆ ನೀಡುವ ಭರವಸೆ ಇತ್ತಿರುವ ಸರ್ಕಾರ, ಈ ರೀತಿ ಅಶ್ಲೀಲ ಎಸ್ ಎಂಎಸ್ ದಾಳಿಯನ್ನು ಪರಿಗಣಿಸುವುದು ಉತ್ತಮ. ದೈಹಿಕ ಹಿಂಸೆಯಂತೆ ಮಾನಸಿಕ ಹಿಂಸೆಯೂ ಪರಿಗಣಿಸಬೇಕು ಎಂಬುದು ಸಂತ್ರಸ್ತರ ಮನವಿ.












Click it and Unblock the Notifications