ನಾರ್ವೆ ದಾಳಿ: ಸತ್ತವರ ಸಂಖ್ಯೆ 80ಕ್ಕೆ ಏರಿಕೆ

ಈ ದಾಳಿಗೆ ಸಂಬಂಧಿಸಿದಂತೆ 33 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಶುಕ್ರವಾರ ಸಂಭವಿಸಿದ ಈ ಘಟನೆಯಲ್ಲಿ ಅನೇಕ ಮಂದಿ ಗಾಯಗೊಂಡಿದ್ದು, ಆಡಳಿತ ಪಕ್ಷದ ಸಭೆ ನಡೆಯುತ್ತಿದ್ದ ಸಂದರ್ಭ ಬಂದೂಕು ಧಾರಿಯೊಬ್ಬ ಗುಂಡು ಹಾರಿಸಿದ.
ಆನಂತರ ಪ್ರಧಾನ ಮಂತ್ರಿ ಕಚೇರಿ, ಹಣಕಾಸು ಸಚಿವಾಲಯ ಮತ್ತು ಇನ್ನಿತರ ಮಾಧ್ಯಮಗಳನ್ನು ಹೊಂದಿರುವ ಸರ್ಕಾರಿ ಕಟ್ಟಡದಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ದಾಳಿಯ ಹಿಂದೆ ಯಾರ ಕೈವಾಡವಿದೆ ಎಂದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಪ್ರಧಾನಿ ಸ್ಟಾಲ್ಟೆಂಟ್ ಬರ್ಗ್ ಸುರಕ್ಷಿತವಾಗಿದ್ದು, ದಾಳಿಯ ಸಂದರ್ಭದಲ್ಲಿ ಹಾಜರಿದ್ದ ಹಿರಿಯ ಸರ್ಕಾರಿ ಅಧಿಕಾರಿಗಳ ಕುರಿತು ಯಾವುದೇ ವರದಿ ಲಭ್ಯವಾಗಿಲ್ಲ.












Click it and Unblock the Notifications