ಅಕ್ರಮ ಗಣಿಗಾರಿಕೆ ಪತ್ತೆಗೆ ಗೂಗಲ್ ಅರ್ಥ್ ಬಳಕೆ?

ಗಣಿಗಾರಿಕೆ ಸ್ಥಳ ಪರಿಶೀಲನೆ, ಗಡಿ ಭಾಗದ ನಕ್ಷೆ ಎಲ್ಲವನ್ನೂ ಗೂಗಲ್ ತಂತ್ರಾಂಶ ಬಳಸಿ ತಯಾರಿಸಬಹುದು. ಇದರಿಂದ ಅಕ್ರಮ ಗಣಿಗಾರಿಕೆ ತಡೆಗಟ್ಟಲು ಸಾಧ್ಯ ಎಂದು ಪರಿಸರವಾದಿ ಮಾಧವ್ ಗಾಡ್ಗೀಳ್ ಹೇಳಿದ್ದಾರೆ.
ಸರ್ಕಾರ ಹೊರಡಿಸಿರುವ ಭವಿಷ್ಯದ ಯೋಜನೆ 2021ರಲ್ಲಿ ಪ್ರಕಟಿಸಲಾಗಿರುವ ನಕ್ಷೆಗಳೊಡನೆ ಗೂಗಲ್ ಇಮೇಜಸ್ ನಕ್ಷೆಯನ್ನು ಹೋಲಿಸಿ ನೋಡಿ ಸತ್ಯಾಂಶ ತಿಳಿಯಬಹುದು. ಗಣಿ ಮಾಲೀಕರು ತ್ವರಿತಗತಿಯಲ್ಲಿ ಅದಿರು ತೆಗೆಯುತ್ತಿರುವ ಹಿಂದಿನ ರಹಸ್ಯ ಅರ್ಥವಾಗುತ್ತಿಲ್ಲ. ಭೂಗರ್ಭದಲ್ಲಿರುವ ಅದಿರು ಏನು ತಕ್ಷಣಕ್ಕೆ ಮಾಯವಾಗುವುದಿಲ್ಲ ಎಂದು ಗಾಡ್ಗೀಳ್ ಹೇಳಿದರು.
ಗೋವಾದಲ್ಲಿ 100 ಕ್ಕೂ ಹೆಚ್ಚು ಗಣಿ ಪ್ರದೇಶಗಳಿದ್ದು, 45 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟು ಕಬ್ಬಿಣದ ಅದಿರನ್ನು ವಾರ್ಷಿಕವಾಗಿ ಹೊರ ತೆಗೆಯಲಾಗುತ್ತದೆ. 130 ಗಣಿ ಮಾಲೀಕರು ಹೊಸ ಅನುಮತಿಗೆ ಬೇಡಿಕೆ ಸಲ್ಲಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳು ಈಗಾಗಲೇ ನಾಶವಾಗಿವೆ. ಪರಿಸರ ಮಾಲಿನ್ಯದ ಜೊತೆಗೆ, ಕಾಡು ಕೂಡ ನಾಶವಾಗಿದೆ ಎಂದು ಅವರು ಹೇಳಿದರು.












Click it and Unblock the Notifications