ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ಬಲೆಗೆ ಮಹಾನ್ ಭ್ರಷ್ಟರ ಸಮಗ್ರ ವಿವರ

By * ವಿಜಿ ಪಾಟೀಲ, ದಾವಣಗೆರೆ
|
Google Oneindia Kannada News

Lokayukta raid in Davangere
ದಾವಣಗೆರೆ, ಜು 22: ಲೋಕೋಪಯೋಗಿ ಇಲಾಖೆ ಕಾಯ೯ಪಾಲಕ ಅಭಿಯಂತರ ಸಿ. ವಿರುಪಾಕ್ಷಪ್ಪ ಸೇರಿದಂತೆ ವಿವಿಧ ಇಲಾಖೆಗೆ ಸೇರಿದ ಅಧಿಕಾರಗಳ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.

ನಗರದ ಸಿದ್ಧವೀರಪ್ಪ ಬಡಾವಣೆಯ 2ನೇ ತಿರುವಿನಲ್ಲಿರುವ ನಿವಾಸ ಬಸವ ಸದನದ ಮೇಲೆ ಲೋಕಾಯುಕ್ತ ಎಸ್ಪಿ ಎಸ್.ಎಫ್. ಕಂಬಾರ ನೇತೃತ್ವದಲ್ಲಿ ಶುಕ್ರವಾರ(ಜು.22) ಬೆಳಗಿನ ಜಾವ 5.30ಕ್ಕೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ವಶಪಡಿಸಿಕೊಂಡಿರುವ ಸ್ವತ್ತುಗಳ ಬಗ್ಗೆ ಸಂಪೂಣ೯ ಮಾಹಿತಿ ಸಿಕ್ಕಿಲ್ಲ.

ಬೆಂಗಳೂರು ಯಲಹಂಕ ಪೊಲೀಸ್ ಠಾಣೆ ಪಕ್ಕದ ತರಳುಬಾಳು ಎನ್ ಕ್ಲೇವ್ ಎಸ್ ಟಿ ಬಿ ಟಿಯಲ್ಲಿ 3 ಅಂತಸ್ತಿ ಕಟ್ಟಡವಿದ್ದು, ಅದು ಸುಮಾರು 30-40ಲಕ್ಷ ಬೆಲೆ ಬಾಳುತ್ತದೆ ಎಂಬ ಪ್ರಾಥಮಿಕ ಮಾಹಿತಿ ದೊರೆತಿದೆ.

ಸಾಕಷ್ಟು ಚಿನ್ನಾಭರಣ, 5 ಲಕ್ಷ ನಗದು, ಜೊತೆಗೆ ಕೆಲ ಆಸ್ತಿ ಸಂಬಂಧಿತ ದಾಖಲೆ ಪತ್ರಗಳು ದೊರೆತಿದ್ದು, ಸ್ವತ್ತಿನ ಲೆಕ್ಕಾಚಾರವನ್ನು ಅಧಿಕಾರಿಗಳು ಮುಂದುವರಿಸಿದ್ದಾರೆ. ಮಧ್ಯಾಹ್ನದ ವೇಳೆ ಒಟ್ಟು ಸ್ವತ್ತಿನ ವಿವರ ನೀಡಲಾಗುವುದು ಎಂದು ಕಂಬಾರ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಉಳಿದಂತೆ, ಬೀದರ್, ಕೊಪ್ಪಳದಲ್ಲೂ ದಾಳಿ ನಡೆದಿದ್ದು, ಗಂಗಾವತಿಯ ಕಾರಟಗಿಯ ದಡೇಸೂಗೂರು ಗ್ರಾಮಪಂಚಾಯತ್ ಕಾರ್ಯದರ್ಶಿ ಗಣಿಸಾಬ್ ಮನೆ ಮೇಲೆ ದಾಳಿ ನಡೆದಿದೆ. ಹಾಗೂ ಬೀದರ್ ಡಿಪಿಒ ಬಸವರಾಜ್ ವರವಟ್ಟಿ ಅವರ ನಿವಾಸದ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬೆಳ್ತಂಗಡಿ ಆರ್ ಎಫ್ ಓ ರಾಘವ :87.92 ಲಕ್ಷ; ಮೃತ್ಯುಂಜಯ ಸ್ವಾಮಿ:6 ಕೋಟಿ ರು; ಬಸವರಾಜ ವರವಟ್ಟಿ: 34.75 ಲಕ್ಷ ರು; ಮೈಲಾರಪ್ಪ ಎಫ್ ಡಿಎ: 53.5 ಲಕ್ಷ ರು ಹೊಂದಿದ್ದರು.

English summary
Lokayukta sleuths raid Davangere PWD Executive engineer C Virupakshappa's property. Lokayukta police today raided many government officers house and office across the state. Lokayukta unearthed assets worth over Rs. 40 lakhs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X