25 ಯುವತಿಯರಿಗೆ ಕೈ ಕೊಟ್ಟ ಫೇಸ್ ಬುಕ್ ಪ್ಲೇಬಾಯ್ ಸೆರೆ

ಎನ್ನಾರೈ ಎಂದು ಪೋಸ್ ಕೊಡುತ್ತಿದ್ದ ವಿಜಯ್, ತನ್ನ ಪೋಷಕರು ಅಮೇರಿಕದಲ್ಲಿದ್ದಾರೆ. ನಾನು ಭಾರತದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದ. ಯುವತಿಯರನ್ನು ಚಾಟಿಂಗ್ ಮೂಲಕ ಸೆಳೆದು ಕರೆದುಕೊಂಡು ಹೋಗಿ ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದ.
ಇವನ ಮಾತಿನ ಜಾಲಕ್ಕೆ ಸುಮಾರು 25ಕ್ಕೂ ಹೆಚ್ಚು ಯುವತಿಯರು ಸಿಲುಕಿದ್ದರು. ಯುವತಿಯರಿಂದ ಹಣ, ಒಡವೆ ಪಡೆಯುತ್ತಿದ್ದ. ನಂತರ ಆ ಹುಡುಗಿ ಕೈ ಬಿಟ್ಟು ಮತ್ತೊಬ್ಬಳನ್ನು ಹುಡುಕಿಕೊಳ್ಳುತ್ತಿದ್ದ.
ಇವನ ಮೋಸದ ಮಾತಿಗೆ ಮರುಳಾಗಿದ್ದ ಹುಡುಗಿಯರಲಿ ಮೂವರು ಧೈರ್ಯಮಾಡಿ ಪೊಲೀಸರ ಮೊರೆ ಹೊಕ್ಕಿದ್ದರು. ಪೊಲೀಸರ ಪ್ರಕಾರ ಈತ 25ಕ್ಕೂ ಹೆಚ್ಚಿನ ಮಂದಿಗೆ ಮೋಸ ಮಾಡಿದ್ದಾನೆ. ತನಿಖೆ ಜಾರಿಯಲ್ಲಿದೆ.












Click it and Unblock the Notifications