ವೈಟ್ ಫೀಲ್ಡ್ ಆಶ್ರಮದಲ್ಲಿ ಸಿಕ್ಕಿದ್ದು ಬರೀ 6 ಕೆಜಿ ಚಿನ್ನ!

ಇಂದು ಒಟ್ಟಾರೆ 6 ಕೆಜಿ ಚಿನ್ನ, 245 ಕೆಜಿ ಬೆಳ್ಳಿ, ನಗನಾಣ್ಯಗಳು ಪತ್ತೆಯಾಗಿವೆ. 80.5 ಲಕ್ಷ ರೂ ನಗದು ಸೇರಿ ಎಲ್ಲವನ್ನೂ ಕಾಡುಗೋಡಿಯ ಕೆನರಾ ಬ್ಯಾಂಕ್ ನಲ್ಲಿ ಇಡಲಾಗಿದೆ.
ಎಂದು ಆಶ್ರಮದ ವಕ್ತಾರ ಪ್ರೊ ಅನಂತರಾಮನ್ ಹೇಳಿದ್ದಾರೆ.
ಬಾಬಾ ಅವರ ನಿಕಟ ವರ್ತಿ ರತ್ನಾಕರ್, ಟ್ರಸ್ಟಿ ವಿನಯ್ ಕುಮಾರ್ ಸೇರಿದಂತೆ ಎಲ್ಲಾ ಐದು ಟ್ರಸ್ಟಿಗಳು, ಜಿಲ್ಲಾಧಿಕಾರಿ ಎಂಕೆ ಅಯ್ಯಪ್ಪ, ತಹಸೀಲ್ದಾರ್ ಶಿವಕುಮಾರ್ ಅವರ ಸಮ್ಮುಖದಲ್ಲಿ ಬೆಳಗ್ಗೆ 10 ಗಂಟೆಗೆ ಪರಿಶೀಲನೆ ಆರಂಭವಾಗಿ ಸಂಜೆ ನಾಲ್ಕರ ವೇಳೆಗೆ ಮುಕ್ತಾಯವಾಯಿತು.
ಸುಮಾರು 17 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿರುವ ಸಾಯಿಬಾಬಾ ಆಶ್ರಮದ ನಾಲ್ಕು ಕೊಠಡಿಗಳನ್ನು ಇಂದು ಶೋಧಿಸಲಾಯಿತು. ಪುಟ್ಟಪರ್ತಿ ಆಶ್ರಮದಲ್ಲಿ ಅಪಾರ ಪ್ರಮಾಣದ ಸಂಪತ್ತು ಸಿಕ್ಕ ನಂತರ ಇಲ್ಲಿ ಕೂಡಾ ಅದೇ ಪ್ರಮಾಣದಲ್ಲಿ ಚಿನ್ನ, ಬೆಳ್ಳಿ ನಗದು ಸಿಗುವ ಬಗ್ಗೆ ಸಾರ್ವಜನಿಕರಲ್ಲಿ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆಯಲು ಟ್ರಸ್ಟಿಗಳು ಶೋಧನೆಗೆ ಮುಂದಾಗಿದ್ದರು.
ಪುಟ್ಟಪರ್ತಿ ಆಸ್ತಿ ವಿವರ: ಬಾಬಾ ತಂಗುತ್ತಿದ್ದ ಯಜುರ್ ಮಂದಿರದ ಕೋಣೆಯಲ್ಲಿ ಇತ್ತೀಚೆಗೆ 34.5 ಕೆಜಿ ಚಿನ್ನ, 430 ಕೆಜಿ ಬೆಳ್ಳಿ, 1,90,53,899 ನಗದು ಸಿಕ್ಕಿತ್ತು. ಇದಕ್ಕೂ ಮೊದಲು ಜೂ 16 ರಂದು 98 ಕೆಜಿ ಚಿನ್ನ, 307 ಕೆಜಿ ಬೆಳ್ಳಿ ಹಾಗೂ 11.56 ಕೋಟಿ ನಗದು ಲಭಿಸಿತ್ತು.
ಮೂರನೇ ಸುತ್ತಿನಲ್ಲಿ ಚಿನ್ನ ಹಾಗೂ ಬೆಳ್ಳಿ ನಗದು ಸೇರಿ 74 ಲಕ್ಷ ಮೌಲ್ಯ ತೂಗಿತ್ತ್ತು. 3 ಲಕ್ಷ ರೂ ಬೆಲೆಯ ಅಪರೂಪದ ವಜ್ರದ ಉಂಗುರ ಕೂಡಾ ಇದರಲ್ಲಿ ಸೇರಿದೆ.












Click it and Unblock the Notifications