ದಂಪತಿಯ ವಿಡಿಯೋ ತೆಗೆದು ಜೈಲುಪಾಲಾದ ಹೋಟೆಲ್ ನೌಕರ

ಆಘಾತಕಾರಿ ಸಂಗತಿಯೆಂದರೆ ಪಟನಾದ ಮಹಿಳೆಯೊಬ್ಬರು ತಮ್ಮ ಪತಿ ಜತೆ ಹಾಸಿಗೆಯಲ್ಲಿ ಏಕಾಂತದಲ್ಲಿದ್ದಾಗ ಆ ಸನ್ನಿವೇಶಗಳನ್ನು ಕ್ಯಾಮೆರಾ ಮೂಲಕ ಚಿತ್ರಿಸುತ್ತಿದ್ದುದು ಅವರ ಗಮನಕ್ಕೆ ಬಂದಿದೆ. ಸದರಿ ಮಹಿಳೆಯು ಕೇಂದ್ರ ಸಚಿವರೊಬ್ಬರ ಅತಿಥಿಯಾಗಿ ಬಂದಿದ್ದರು. ಹಾಸ್ಟೆಲ್ ನ ನೌಕರನೊಬ್ಬ ಈ ಕುಕೃತ್ಯದಲ್ಲಿ ತೊಡಗಿದ್ದ. ಜುಲೈ 12ರಂದು ಆ ಮಹಿಳೆ ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದಾರೆ.
ಏನಾಯಿತೆಂದರೆ... ಹೋಟೆಲಿನ ಅತಿಥಿ ಸುಷ್ಮಾ ಅವರು ರೂಂ ನಂಬರ್ 55ರಲ್ಲಿ ಪತಿ ಜತೆಗೂಡಿ ತಂಗಿದ್ದರು. ಆ ವೇಳೆ ರೆಸೆಪ್ಷನಿಸ್ಟ್ ಮುಕೇಶ್ ಮೊಬೈಲ್ ನಲ್ಲಿ ತಮ್ಮ ಆಪ್ತ ಕ್ಷಣಗಳನ್ನು ವಿಡಿಯೋ ಮಾಡುತ್ತಿರುವುದು ಅವರ ಗಮನಕ್ಕೆ ಬಂದಿತು. ಮುಕೇಶ್ ಜತೆ ಮತ್ತೊಬ್ಬ ವ್ಯಕ್ತಿಯೂ ಇದ್ದ. ಜೋರಾಗಿ ಕಿರುಚಿಕೊಂಡಾಗ ಅವರಿಬ್ಬರೂ ಪರಾರಿಯಾದರು ಎಂದು ಸುಷ್ಮಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ. ಮುಕೇಶ್ ಚಂದ್ ಎಂಬ ಆ ನೌಕರನನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
ಈ ಮಧ್ಯೆ, ದಂಪತಿಯು ಮತ್ತೊಂದು ಕೋಣೆಯಲ್ಲಿ ತಂಗಿದ್ದ ತಮ್ಮ ಸ್ನೇಹಿತನಿಗೂ ವಿಷಯ ತಿಳಿಸಿದರು. ಮೂವರೂ ರೆಸೆಪ್ಷನ್ ಬಳಿಗೆ ಬಂದು ಮುಕೇಶನನ್ನು ವಿಚಾರಿಸತೊಡಗಿದರು. ಮೂವರೂ ಮುಖ್ಯದ್ವಾರಕ್ಕೆ ಓಡಿಬಂದಾಗ ಮುಕೇಶ್ ನಡುಗುತ್ತಾ ನಿಂತಿದ್ದು ಕಾಣಿಸಿತು. ಆಗ ಅವನು ಏಕಾಏಕಿ ಮೂವರ ಮೇಲೂ ಹಲ್ಲೆ ಮಾಡತೊಡಗಿದ. ಈ ವೇಳೆ ಮೊಬೈಲ್ ಕೆಳಗೆ ಬಿದ್ದು, ಹಾಳಾಯಿತು. ಆದರೆ ಸುಷ್ಮಾ ಮೆಮರಿ ಕಾರ್ಡನ್ನು ತಮ್ಮ ಕೈಗೆ ತೆಗೆದುಕೊಂಡು, ಪೊಲೀಸರಿಗೆ ಒಪ್ಪಿಸಿದ್ದಾರೆ.
ಇತ್ತೀಚೆಗೆ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಇಂತಹುದೇ ಹಗರಣ ನಡೆದು, ವೀಡಿಯೊ ತೆಗೆದು ಎಂಎಂಎಸ್ ಮಾಡುತ್ತಿದ್ದ 23 ವರ್ಷದ ಜನಾರ್ಧನ ಕುಮಾರ ಪ್ರಸ್ತುತ ಜೈಲಿನಲ್ಲಿದ್ದಾನೆ.












Click it and Unblock the Notifications