ಲಂಡನ್: ಈ ನಿರುದ್ಯೋಗಿ ವಯಸ್ಸು ಮುವ್ವತ್ತೂ ಇಲ್ಲ; ಆಗ್ಲೇ ತಾತಾ!
ಲಂಡನ್,
ಜುಲೈ 20: ಅವನ ವಯಸ್ಸು ಕೇವಲ 29 ವರ್ಷ; ನಿರುದ್ಯೋಗಿ ಬೇರೆ. ಕೆಲಸವಿದ್ದ ಬಡಗಿ ಏನು ಮಾಡಬಹುದೋ ಅದನ್ನೇ ಮಾಡಿದ್ದಾನೆ. ಯಥಾ ಪಿತಾ ತಥಾ ಪುತ್ರಿ ಎನ್ನುವಂತೆ ಅವನ 14 ವರ್ಷದ ಮಗಳೂ ಅದಾಗಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದರಿಂದ ಬ್ರಿಟನ್‌ನ ಅತ್ಯಂತ ಚಿಕ್ಕ ವಯಸ್ಸಿನ ತಾತ ಸದ್ಯಕ್ಕೆ ಈತನೇ ಆಗಿದ್ದಾನೆ. id="toptextpromo">ಆದರೆ
ಈ ದಾಖಲೆ ಹೆಚ್ಚು ಕಾಲ ಬಾಳಲಾರದು. ಏಕೆಂದರೆ ಇನ್ನೂ ಚಿಕ್ಕ ಚಿಕ್ಕ ವಯಸ್ಸಿಗೇ ಮದುವೆಯಾಗುವ ಜಾಯಮಾನ ಇಲ್ಲಿನವರಲ್ಲಿ ಹೆಚ್ಚಾಗುತ್ತಿದೆ. ವೇಲ್ಸ್‌ನ ಶೆಮ್ ಡೇವಿಸ್ 14 ವರ್ಷದಲ್ಲಿ ಅಪ್ಪನಾಗಿದ್ದ. ಇದೀಗ ಶಾಲಾ ವಿದ್ಯಾರ್ಥಿನಿಯಾಗಿರುವ ಆತನ ಮಗಳು ಟಿಯಾ 15ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೊದಲೇ 15 ವರ್ಷದ ಗೆಳೆಯನಿಂದ ತಾಯಿಯಾಗಿದ್ದಾಳೆ. id='are-slot-1' class='oiad oi-axt oiadv'> id='top-searched-articles'>ಇದು
ಆಕೆಯ ತಾಯಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಯಾಗಿರುವ ಡೇವಿಸ್‌ಗೆ ಸಂತಸ ಮೂಡಿಸಿದೆ. ಆದರೆ ಆಕೆಯ ತಾಯಿ ಕೆಲ್ಲಿ ಮಾತ್ರ 'ನಾನು ಏನಾಗಬಾರದೆಂದು ಹಲುಬುತ್ತಿದ್ದೆನೋ ಅದೇ ಆಗಿಹೋಗಿದೆ. ನನ್ನಂತೆ ಚಿಕ್ಕ ವಯಸ್ಸಿಗೇ ಮಗುವನ್ನು ಹೆರದಂತೆ ಪದೇ ಪದೆ ಸಲಹೆ ನೀಡಿದ್ದರೂ ಆಕೆ ಕಿವಿಗೊಡಲಿಲ್ಲ' ಎಂದು ಗೋಳಾಡಿದ್ದಾಳೆ.











Click it and Unblock the Notifications