ಕಸ್ಟಮ್ಸ್ ಅಧಿಕಾರಿ ಕೈ ಹಾಕಿದ್ರೆ ಸಿಕ್ಕಿದ್ದು ಸೆಕ್ಸ್ ಟಾಯ್ಸ್
ಮುಂಬೈ
ಜು 19: ಅಗತ್ಯಕ್ಕಿಂತ ಹೆಚ್ಚಿನ ಚಿನ್ನಾಭರಣ ಸಾಗಿಸುತ್ತಿರುವ ಶಂಕೆಯಿಂದ ಯುಎಎಸ್ ನಿಂದ ಬರುತ್ತಿದ್ದ ಮಹಿಳೆಯನ್ನು ತಡೆಯಲಾಯಿತು. ಆಕೆ ಬ್ಯಾಗ್ ನಲ್ಲಿ ಆಭರಣ ಸಿಗುವ ನಿರೀಕ್ಷೆಯಲ್ಲಿ ಕೈ ಹಾಕಿದ ಅಧಿಕಾರಿಯ ಕೈಗೆ ಸಿಕ್ಕ ವಸ್ತು ಕಂಡು ಅಲ್ಲಿದ್ದವರು ಮೂಕವಿಸ್ಮಿತರಾಗಿ ಒಬ್ಬರನ್ನು ಒಬ್ಬರು ಕ್ಷಣಕಾಲ ನೋಡುತ್ತಾ ನಿಂತು ಬಿಟ್ಟರು. id="toptextpromo">ಛತ್ರಪತಿ
ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಚಾರಣೆ ಸಂದರ್ಭದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ಮಹಿಳೆ ಬ್ಯಾಗ್ ನಲ್ಲಿ ಸರಿಸುಮಾರು 60 ಸೆಕ್ಸ್ ಆಟಿಕೆಗಳು ಕಂಡು ಬಂದಿದ್ದವು. ಕಾಮ ಪ್ರಚೋದಕ ವಸ್ತುಗಳು, ಒಳ ಉಡುಪುಗಳಲ್ಲದೆ ಅಪಾರ ಪ್ರಮಾಣದ ಚಿನ್ನ ಕೂಡಾ ಕಸ್ಟಮ್ಸ್ ಕೈ ಸೇರಿದೆ. id='are-slot-1' class='oiad oi-axt oiadv'> id='top-searched-articles'>ಲಾಸ್
ಏಂಜಲೀಸ್ ನಿಂದ(SQ 422) ವಿಮಾನ ಏರಿ ಬಂದ 50 ವರ್ಷದ ಮಹಿಳೆ ಇದ್ದ ವಸ್ತುಗಳ ಒಟ್ಟು ಮೌಲ್ಯ 8 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ. ಸೆಕ್ಸ್ ಟಾಯ್ಸ್ ಹಾಗೂ ಒಳ ಉಡುಪುಗಳನ್ನು ತನ್ನ ಮಗಳ ಮದುವೆ ಉಡುಗೊರೆ ತಂದಿದ್ದೆ ಎಂದು ಆರೋಪಿತ ಬಚು ಅಲಿ ಹೇಳಿಕೆ ನೀಡಿದ್ದಾಳೆ. ಆದರೆ, ಇಷ್ಟು ಪ್ರಮಾಣದ ಆಟಿಕೆಗಳು, ಒಳ ಉಡುಪುಗಳು ಏತಕ್ಕೆ ಎಂಬುದಕ್ಕೆ ಉತ್ತರಿಸಿಲ್ಲ ಎಂದು ಗುಪ್ತಚರ ಇಲಾಖೆ ಅಧಿಕಾರಿ ಮಹೇಂದ್ರ ಪಾಲ್ ಹೇಳಿದ್ದಾರೆ.











Click it and Unblock the Notifications