ಪುಟಿನ್‌ಗಾಗಿ ಬಟ್ಟೆ ಕಳಚುವುದಕ್ಕೆ ಸಿದ್ಧವಾದ ರಷ್ಯಾ ಬೆಡಗಿಯರು!

ಬರೋಬ್ಬರಿ 8,00 ಬೆಡಗಿಯರು ಇದಕ್ಕಾಗಿ ಸಿಂಗಾರ-ಬಂಗಾರಗೊಂಡಿದ್ದಾರೆ. ಆನ್‌ಲೈನ್ ಪ್ರಚಾರದ ಭಾಗವಾಗಿರುವ ಈ ದೃಶ್ಯಗಳು ಜನಪ್ರತಿನಿಧಿಯೊಬ್ಬರ ವೈಬ್‌ಸೈಟ್‌ನಲ್ಲಿ ಕಂಡು ಬಂದಿವೆ. ಸೋವಿಯತ್ ರಷ್ಯಾದ ಆಡಳಿತಾವಧಿಯಲ್ಲಿ ಜಾಹೀರಾತಿನಲ್ಲಿ ನಗ್ನತೆಯನ್ನು ಬಳಸುವುದಕ್ಕೆ ನಿರ್ಬಂಧವಿತ್ತು.
'ಪುಟಿನ್ಸ್ ಆರ್ಮಿ' ಎಂಬ ಹೆಸರಿನ ಈ ವಿಡಿಯೊ ಮುದ್ರಿಕೆಯಲ್ಲಿ ಹೈ ಹೀಲ್ಡ್ ಚಪ್ಪಲಿ ಧರಿಸಿರುವ ಕಪ್ಪು ಸೂಟ್ ತೊಟ್ಟಿರುವ ಡಯಾನ ಎಂಬ ಹೆಸರಿನ ಸುಂದರ ವಿದ್ಯಾರ್ಥಿನಿಯೊಬ್ಬಳು ಮಾಸ್ಕೊ ರಸ್ತೆಗಳಲ್ಲಿ ನಡೆಯುತ್ತಾ 'ಪುಟಿನ್‌ಗಾಗಿ ನಾನು ಬಟ್ಟೆ ಕಳಚುವುದಕ್ಕೂ ಸಿದ್ಧ' ಎಂದು ಹೇಳುತ್ತಾ ನಗ್ನಗೊಳ್ಳುವ ದೃಶ್ಯ ಇದೆ ಎಂದು ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.
2012ರ ಮಾರ್ಚ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾಡಿಮಿರ್ ಪುಟಿನ್ ಪರ ಬೆತ್ತಾಲಾಗುತ್ತಾ ಪ್ರಚಾರ ನಡೆಸಲು ಹುಡುಗಿಯರನ್ನು ಆಹ್ವಾನಿಸಲಾಗುತ್ತಿದೆ. ಈ ಯುವತಿಯರಿಗೆ ಐಪಾಡ್2 ಅನ್ನು ಗೆಲ್ಲುವ ಅವಕಾಶವನ್ನೂ ನೀಡಲಾಗಿದೆ.












Click it and Unblock the Notifications